ನ.18ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ ಸಾಧ್ಯತೆ: ಸರ್ಕಾರದ ಮೂಲಗಳು 

ಮುಂದಿನ ತಿಂಗಳು ನವೆಂಬರ್ 18ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗಿ ಡಿಸೆಂಬರ್ ಮೂರನೇ ವಾರದವರೆಗೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 
ಸಂಸತ್ತು
ಸಂಸತ್ತು

ನವದೆಹಲಿ: ಮುಂದಿನ ತಿಂಗಳು ನವೆಂಬರ್ 18ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗಿ ಡಿಸೆಂಬರ್ ಮೂರನೇ ವಾರದವರೆಗೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 


ಚಳಿಗಾಲ ಅಧಿವೇಶನ ಆರಂಭದ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ನಂತರ ಈ ಮುನ್ಸೂಚನೆ ಸಿಕ್ಕಿದೆ.


ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ನಿನ್ನೆ ಸಂಪುಟ ಸಮಿತಿ ಸಭೆ ನಡೆಯಿತು. ಕೇಂದ್ರ ಸಚಿವ ಸಂಪುಟ ಸಭೆ ಮುಂದಿನ ವಾರ ದೆಹಲಿಯಲ್ಲಿ ನಡೆಯಲಿದ್ದು ಆ ಬಳಿಕ ಅಧಿಕೃತವಾಗಿ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ.
ಕಳೆದ ಎರಡು ವರ್ಷಗಳಲ್ಲಿ ಸಂಸತ್ತಿನ ಚಳಿಗಾಲ ಅಧಿವೇಶನ ನವೆಂಬರ್ 21ಕ್ಕೆ ಆರಂಭವಾಗಿ ಜನವರಿ ಮೊದಲ ವಾರಕ್ಕೆ ಮುಕ್ತಾಯವಾಗುತ್ತಿತ್ತು. 


ಈ ಬಾರಿಯ ಅಧಿವೇಶನದಲ್ಲಿ ಹಲವು ಮಸೂದೆಗಳಲ್ಲದೆ, ಎರಡು ಪ್ರಮುಖ ವಿಧೇಯಕಗಳನ್ನು ಕಾನೂನಾಗಿ ಜಾರಿಗೆ ತರುವ ಯೋಜನೆಯಲ್ಲಿ ಸರ್ಕಾರವಿದೆ. ಅದರಲ್ಲಿ ಒಂದು ವಿಧೇಯಕ ಕಾರ್ಪೊರೇಟ್ ತೆರಿಗೆಗಳ ದರ ಇಳಿಕೆ ಮತ್ತು ಇ-ಸಿಗರೇಟ್ ಗಳು ಮತ್ತು ಅದೇ ರೀತಿಯ ಇತರ ಉತ್ಪನ್ನಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟಕ್ಕೆ ನಿಷೇಧ ಹೇರುವ ಇನ್ನೊಂದು ವಿಧೇಯಕವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com