ಸರ್ಕಾರದ ವಿಳಂಬ ನೀತಿ, ನಿರಾಸಕ್ತಿಯೇ ಆರ್ಥಿಕ ಕುಸಿತಕ್ಕೆ ಕಾರಣ: ಡಾ ಮನಮೋಹನ್ ಸಿಂಗ್ 

ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ದೇಶದ ಆರ್ಥಿಕತೆ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.

Published: 17th October 2019 03:12 PM  |   Last Updated: 17th October 2019 03:42 PM   |  A+A-


Former PM Manmohan Singh.

ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಇತರ ಕಾಂಗ್ರೆಸ್ ನಾಯಕರು

Posted By : Sumana Upadhyaya
Source : IANS

ಮುಂಬೈ: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ದೇಶದ ಆರ್ಥಿಕತೆ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಈ ಮೂಲಕ ಇದೇ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಜನತೆ ಮುಂದೆ ಆರ್ಥಿಕತೆಯ ಕಠೋರ ಪರಿಸ್ಥಿತಿಯನ್ನು ಮುಂದಿಟ್ಟು ಕಾಂಗ್ರೆಸ್ ನತ್ತ ಜನರ ಮತಗಳು ವಾಲುವ ಪ್ರಯತ್ನ ಮಾಡಿದ್ದಾರೆ. 


ಇಂದು ಮುಂಬೈಯಲ್ಲಿ ಮಾತನಾಡಿದ ಅವರು, ಎನ್ ಡಿಎ ಸರ್ಕಾರದ ನಿರಾಸಕ್ತಿ ಮತ್ತು ವಿಳಂಬ ನೀತಿಯಿಂದ ಇಂದು ದೇಶದ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದು ಹೋಗಿದೆ. ಪುಣೆಯ ಆಟೊಮೊಬೈಲ್ ವಲಯದಲ್ಲಿನ ಉದ್ಯಮ ಪಾತಾಳಕ್ಕೆ ಇಳಿದಿದೆ. ಮಹಾರಾಷ್ಟ್ರದಲ್ಲಿ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಆರ್ಥಿಕ ಹಿಂಜರಿತದಿಂದ ಮಹಾರಾಷ್ಟ್ರ ರಾಜ್ಯದ ಮೇಲೆ ತೀವ್ರ ಹೊಡೆತ ಬಿದ್ದಿದೆ, ಆದರೆ ಸರ್ಕಾರ ಬೇರೆಯವರ ಮೇಲೆ ಆಪಾದನೆ ಹೊರಿಸುವ ಪ್ರಯತ್ನದ ಗೀಳಿನಲ್ಲಿಯೇ ಇದೆ ಎಂದರು.


ಹಿಂದೆ ವಾಣಿಜ್ಯ ನಗರಿ ಮುಂಬೈ ಒಳಗೊಂಡಂತೆ ಇಡೀ ಮಹಾರಾಷ್ಟ್ರ ಹೂಡಿಕೆಯಲ್ಲಿ ನಂಬರ್ 1 ಸ್ಥಾನದಲ್ಲಿತ್ತು, ಆದರೆ ಇಂದು ರೈತರ ಆತ್ಮಹತ್ಯೆಯಲ್ಲಿ ನಂಬರ್ 1 ಆಗಿದೆ ಎಂದು ಟೀಕಿಸಿದರು.


ದೇಶದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಿಂದ ಹೊರಬರಲು ಕಾರ್ಮಿಕ ತೀವ್ರ ಕೈಗಾರಿಕೆಗಳ ಸ್ಥಾಪನೆ ಒಳಗೊಂಡು ಹಲವು ಕ್ರಮ ಕೈಗೊಳ್ಳಬೇಕು ಎಂದರು.

ಎನ್ ಡಿಎ ಸರ್ಕಾರದ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಬಗ್ಗೆ ಮಾತನಾಡಿದ ಅವರು, 2024ಕ್ಕೆ 5 ಟ್ರಿಲಿಯನ್ ಡಾಲರ್ ಗುರಿ ಮುಟ್ಟಬೇಕಾದರೆ ವರ್ಷಕ್ಕೆ ಶೇಕಡಾ 10ರಿಂದ 12ರಷ್ಟು ಜಿಡಿಪಿಯಾಗಬೇಕು. ಆದರೆ ಬಿಜೆಪಿ ಆಡಳಿತದಡಿಯಲ್ಲಿ ಅಭಿವೃದ್ಧಿ ದರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ನಿಗದಿತ ಶೇಕಡಾ 7.3ಗಿಂತ ಶೇಕಡಾ 6.1 ರಷ್ಟಾಗಿದೆ. ಹೀಗೆ ಆರ್ಥಿಕ ದರ ಕುಸಿಯುತ್ತಿರುವಾಗ 5 ಟ್ರಿಲಿಯನ್ ಡಾಲರ್ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಕೇಳಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp