370ನೇ ವಿಧಿ, ಆದಿವಾಸಿಗಳ ವಿವಾದ : ಕಾಂಗ್ರೆಸ್ ವಿರುದ್ಧ ಅಮಿತ್  ಶಾ ವಾಗ್ದಾಳಿ

370ನೇ ವಿಧಿ ಹಾಗೂ ಆದಿವಾಸಿಗಳ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ  ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಗಡ್ಚಿರೋಲಿ:  370ನೇ ವಿಧಿ ಹಾಗೂ ಆದಿವಾಸಿಗಳ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ  ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

 ಕಾಂಗ್ರೆಸ್ 70 ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ್ದು, ತಮ್ಮ ನಾಲ್ಕು ತಲೆಮಾರುಗಳು ಆದಿವಾಸಿಗಳಿಗಾಗಿ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿರುವ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಈ ಭಾಗವನ್ನು ನಕ್ಸಲ್ ಮುಕ್ತ ಪ್ರದೇಶವನ್ನಾಗಿ ಮಾಡಲಾಗುವುದು ಎಂದರು.

ಗಡ್ಚಿರೋಲಿ ಜಿಲ್ಲೆಯ ಅಹೆರಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಹಾಗೂ ಎನ್ ಸಿಪಿ ಸರ್ಕಾರಗಳಿಗಿಂತ  ಮೋದಿ ಸರ್ಕಾರ ಆದಿವಾಸಿಗಳಿಗಾಗಿ ಹೆಚ್ಚಿನ ರೀತಿಯ ಕೆಲಸಗಳನ್ನು ಮಾಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್ 370ನೇ ವಿಧಿಯನ್ನು ರದ್ದುಗೊಳಿಸಿಲ್ಲ, ಏಳು ದಶಕಗಳ ಕಾಲ ತನ್ನ  ವೋಟ್ ಬ್ಯಾಂಕಿಗಾಗಿ ಜಮ್ಮು - ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡಲು ಹಾಗೂ 40 ಜನರು ಹತ್ಯೆಗೀಡಾಗಲು ಕಾಂಗ್ರೆಸ್ ಕಾರಣವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ  370ನೇ ವಿಧಿ ರದ್ದುಗೊಂಡಿದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಾಗಿ ಗಡ್ಚಿರೋಲಿ ಒಂದರಲ್ಲಿಯೇ 1. 30 ಲಕ್ಷ ಶೌಚಾಲಯ, 48 ಸಾವಿರ ಅನಿಲ ಸಿಲಿಂಡರ್ ಪೂರೈಕೆ, 48 ಸಾವಿರ ಆದಿವಾಸಿಗಳಿಗೆ ವಿದ್ಯುತ್ ಪೂರೈಕೆ ಹಾಗೂ ಬುಡಕಟ್ಟು ಸಮುದಾಯದ 8 ಸಾವಿರ ಬಡವರಿಗೆ ಮನೆ ನಿರ್ಮಿಸಿಕೊಡಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com