ಪ್ರಫುಲ್ ಪಟೇಲ್
ಪ್ರಫುಲ್ ಪಟೇಲ್

ಅಕ್ರಮ ಹಣ ವರ್ಗಾವಣೆ ಕೇಸ್: ಇಡಿಯಿಂದ ಪ್ರಫುಲ್‌ ಪಟೇಲ್ ವಿಚಾರಣೆ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಂಟ ಇಕ್ಬಾಲ್‌ ಮಿರ್ಚಿ ಜತೆ ಅಕ್ರಮ ಹಣ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಂಟ ಇಕ್ಬಾಲ್‌ ಮಿರ್ಚಿ ಜತೆ ಅಕ್ರಮ ಹಣ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಇಂದು ಬೆಳಗ್ಗೆ 10.30ಕ್ಕೆ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ ಆಗಮಿಸಿದ ಪ್ರಫುಲ್ ಪಟೇಲ್ ಅವರನ್ನು ಬೆಳಗ್ಗೆ 11 ಗಂಟೆಯಿಂದ ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಫುಲ್ ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಭೂಗತ ಜಗತ್ತು-ರಾಜಕೀಯದ ಪ್ರಕರಣ ಸದ್ದು ಮಾಡಿದ್ದು, ಎನ್‌ಸಿಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಫುಲ್‌ ಪಟೇಲ್‌ ಕುಟುಂಬದ ಮಾಲೀಕತ್ವದ ಮಿಲೇನಿಯಂ ಡೆವಲಪರ್ಸ್ ಮತ್ತು ಹತ ಇಕ್ಬಾಲ್‌ ಮಿರ್ಚಿ ನಡುವೆ ಈ ಹಿಂದೆ ನಡೆದ ಭೂಮಿ ಖರೀದಿ ವಹಿವಾಟಿನಲ್ಲಿಅಕ್ರಮ ನಡೆದಿದೆ ಎನ್ನಲಾಗಿದೆ. ಮುಂಬೈನ ಅತಿ ದುಬಾರಿ ಪ್ರದೇಶ ಎನಿಸಿರುವ ವರ್ಲಿಯ ನೆಹರೂ ತಾರಾಲಯದ ಮುಂಭಾಗ ಇಕ್ಬಾಲ್‌ ಪತ್ನಿ ಹಜಾರಾ ಮೆಮೊನ್‌ಗೆ ಸೇರಿರುವ ನಿವೇಶನವನ್ನು ಮಿಲೇನಿಯಂ ಡೆವಲಪರ್ಸ್ ಕಂಪನಿಗೆ ಹಸ್ತಾಂತರಿಸಲಾಗಿತ್ತು. ಹೀಗೆ ಹಸ್ತಾಂತರಗೊಂಡ ನಿವೇಶನದಲ್ಲಿಕಂಪನಿಯು 15 ಅಂತಸ್ತುಗಳ ವಾಣಿಜ್ಯ ಮತ್ತು ಗೃಹ ಬಳಕೆಯ 'ಸೀಜೆ ಹೌಸ್‌' ಹೆಸರಿನ ಕಟ್ಟಡವನ್ನು 2006-07ನೇ ಸಾಲಿನಲ್ಲಿನಿರ್ಮಿಸಿದೆ. 

2007ರಲ್ಲಿ ಮಿಲೇನಿಯಂ ಡೆವಲಪರ್ಸ್ ಕಂಪನಿಯು ಈ ಕಟ್ಟಡದಲ್ಲಿನ ಸರಿಸುಮಾರು 200 ಕೋಟಿ ರೂ. ಮಾರುಕಟ್ಟೆ ಮೌಲ್ಯದ 14,000 ಚದರ ಅಡಿಯ ಎರಡು ಫ್ಲ್ಯಾಟ್‌ಗಳನ್ನು ಇಕ್ಬಾಲ್‌ ಮೆಮೊನ್‌ ಕುಟುಂಬಕ್ಕೆ ನೀಡಿತ್ತು. ಈ ಕೊಡುಕೊಳ್ಳುವಿಕೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬ ಆಪಾದನೆಗಳು ಕೇಳಿಬಂದಿವೆ.

Related Stories

No stories found.

Advertisement

X
Kannada Prabha
www.kannadaprabha.com