ಲೈಂಗಿಕ ದೌರ್ಜನ್ಯ ಪ್ರಕರಣ: ವಿಚಾರಣೆ ಮುಂದೂಡಿಕೆ ಕೋರಿ ತೇಜ್‌ಪಾಲ್ ಸಲ್ಲಿಸಿದ್ದ ಅರ್ಜಿ ವಜಾ

ಮಾಜಿ ಮಹಿಳಾ ಸಹೋದ್ಯೋಗಿಯೊಬ್ಬರು ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ಯತಕಾಲಿಕೆಯ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರ ವಿಚಾರಣೆಯು ಇದೇ ಅಕ್ಟೋಬರ್ 21 ರಿಂದ 23ರವರೆಗೆ ನಿಗದಿಯಾಗಿದೆ. ಇದೀಗ ವಿಚಾರಣೆಯನ್ನು ಮುಂದೂಡಬೇಕೆಂದು....

Published: 18th October 2019 08:22 PM  |   Last Updated: 18th October 2019 08:23 PM   |  A+A-


ತರುಣ್ ತೇಜ್‌ಪಾಲ್

Posted By : Raghavendra Adiga
Source : PTI

ಮುಂಬೈ: ಮಾಜಿ ಮಹಿಳಾ ಸಹೋದ್ಯೋಗಿಯೊಬ್ಬರು ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ಯತಕಾಲಿಕೆಯ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರ ವಿಚಾರಣೆಯು ಇದೇ ಅಕ್ಟೋಬರ್ 21 ರಿಂದ 23ರವರೆಗೆ ನಿಗದಿಯಾಗಿದೆ. ಇದೀಗ ವಿಚಾರಣೆಯನ್ನು ಮುಂದೂಡಬೇಕೆಂದು ಕೋರಿ ತೇಜ್‌ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಅಕ್ಟೋಬರ್ 21ರಿಂದ ಮೂರು ದಿನಗಳ ಕಾಲ ವಿಚಾರಣೆಯನ್ನು ನಿಗದಿಗೊಳಿಸಿ  ಮಾಪುಸಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಕ್ಟೋಬರ್ 7ರ ಆದೇಶವನ್ನು ಪ್ರಶ್ನಿಸಿ ತೇಜ್‌ಪಾಲ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.ತನ್ನ ವಕೀಲರು ಮತ್ತೊಂದು ಪ್ರಕರಣದಲ್ಲಿ ನಿರತರಾಗಿದ್ದಾರೆಂದು ಹೇಳಿಕೊಂಡ ಮಾಜಿ ತೆಹಲ್ಕಾ ಸಂಪಾದಕ ಡಿಸೆಂಬರ್ 2ರ ನಂತರ ವಿಚಾರಣೆ ನಡೆಸಬೇಕೆಂದು ಕೋರಿದ್ದರು.

ಆದರೆ ನ್ಯಾಯಾಲಯ ಅವರ ಅರ್ಜಿ ವಜಾ ಮಾಡಿದೆ.ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಈ ತೀರ್ಪು ಪ್ರಕಟಿಸಿದೆ.

ತೇಜ್‌ಪಾಲ್‌ನ ಕಿರಿಯ ಸಹೋದ್ಯೋಗಿ ಸಂತ್ರಸ್ತೆ 2013 ರಲ್ಲಿ ನಿಯತಕಾಲಿಕೆಯ ಥಿಂಕ್ ಫೆಸ್ಟ್ ಕಾರ್ಯಕ್ರಮದ ಸಂದರ್ಭದಲ್ಲಿ ಗೋವಾದ ಪಂಚತಾರಾ ಹೋಟೆಲ್‌ನಲಿಫ್ಟ್‌ನೊಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ತೇಜ್‌ಪಾಲ್ ಅವರನ್ನು ಗೋವಾ ಅಪರಾಧ ವಿಭಾಗ 2013 ರ ನವೆಂಬರ್ 30 ರಂದು ಬಂಧಿಸಲಾಗಿದ್ದು  2014 ರ ಮೇನಲ್ಲಿ ಜಾಮೀನಿನ ಮೇಲೆ ಹೊರಬಿಡಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp