ಮೋದಿಯವರದು ವಿಭಜನೆ ರಾಜಕಾರಣ, ಅವರಿಗೆ ಆರ್ಥಿಕತೆಯ ಬಗ್ಗೆ ತಿಳುವಳಿಕೆ ಇಲ್ಲ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ಆರ್ಥಿಕತೆಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಮತ್ತು ಅವರ ಸರ್ಕಾರದ ವಿಭಜನೆ ರಾಜಕಾರಣದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಮಹೇಂದ್ರಗಢ: ಪ್ರಧಾನಿ ನರೇಂದ್ರ ಮೋದಿಯವರಿಗೆ ಆರ್ಥಿಕತೆಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಮತ್ತು ಅವರ ಸರ್ಕಾರದ ವಿಭಜನೆ ರಾಜಕಾರಣದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಮಹೇಂದ್ರಗಢದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಮೋದಿ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ದೂಷಿಸಿದ್ದಾರೆ.

ಅಪನಗದೀಕರಣ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್(ಜಿಎಸ್ಟಿ) ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ಸರ್ವನಾಅ ಮಾಡಿದೆ."ಅವರು ಹೇಳಿದರು. "ಜಗತ್ತು ಭಾರತವನ್ನು ಅಪಹಾಸ್ಯ ಮಾಡುತ್ತಿದೆ. ಜಗತ್ತಿಗೆ ದಾರಿ ತೋರಿಸುತ್ತಿದ್ದ ದೇಶ, ಪ್ರೀತಿ, ವಿಶ್ವಾಸದಿಂದಿದ್ದ ದೇಶ, ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದ್ದ ದೇಶ ಇಂದು  ಜಾತಿ ಜಾತಿಗಳ ನಡುವೆ ಹೊಡೆದಾಟವನ್ನು ಕಾಣುತ್ತಿದೆ.ಒಂದು ಧರ್ಮವು ಇನ್ನೊಂದರ ವಿರುದ್ಧ ಹೋರಾಡುತ್ತಿದೆ ಮತ್ತು  ದೇಶದ ಆರ್ಥಿಕತೆ ನಾಶವಾಗಿದೆ. ಪ್ರಧಾನಿ ಮೋದಿ ಅದನ್ನು ನಾಶ ಮಾಡಿದ್ದಾರೆ"ರಾಹುಲ್ ಗಾಂಧಿ ಹೇಳಿದ್ದಾರೆ. 

ಮಾದ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅವರು ಭಯಭೀತರಾಗಿದ್ದಾರೆ ಮತ್ತು ಸತ್ಯವನ್ನು ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.  "ಮಾಧ್ಯಮಗಳು  'ನಮಗೆ ಸತ್ಯ ತಿಳಿದಿದೆ ಆದರೆ ನಾವು ಅದನ್ನು ತೋರಿಸಲು ಸಾಧ್ಯವಿಲ್ಲ ಎಂಬಂತೆ ವರ್ತಿಸುತ್ತಿವೆ. ಏಕೆಂದರೆ ಒಂದೊಮ್ಮೆ ಸತ್ಯ ಬಹಿರಂಗಪಡಿಸಿದರೆ ತಾವು ತಮ್ಮ ಉದ್ಯೋಗ ಕಳೆದುಕೊಳ್ಳುತ್ತೇವೆ. ಎಂದು ಅವರು ಭಯಭೀತರಾಗಿದ್ದಾರೆ. ಮೋದಿ ನರೇಗಾ ಯೋಜನೆಯನ್ನು ಟೀಕಿಸಿದ್ದರು. ಅವರಿಗೆ ಗೆ ಆರ್ಥಿಕತೆಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಬಿಜೆಪಿಯವರು ಎಲ್ಲೇ ಹೋದರೂ ಜನರು ಒಬ್ಬರು ಇನ್ನೊಬ್ಬರೊಡನೆ ಜಗಳ, ಕಾದಾಟಕ್ಕಿಳಿಯುವಂತೆ ಮಾಡುತ್ತಾರೆ.ಅದು ಹಿಂದೂ-ಮುಸ್ಲಿಮರು, ಜಾಟ್-ನಾನ್ ಜಾಟ್ ಏನಾದರೂ ಆಗಿರಲಿ, ಯಾವ ಕಾರಣದಿಂದಲೂ  ವಿಭಜನೆಯ ಮೂಲಕ ಒಂದು ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ"  ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿಯವರಿಗೆ ವೈರಲ್ ಜ್ವರವಿದ್ದ ಕಾರಣ ಚುನಾವಣಾ ರ್ಯಾಲಿಯಲ್ಲಿ ಭಾಗವ್ಹಿಸಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಾಗಿ ರಾಹುಲ್ ಗಾಂಧಿ ಇಂದಿನ ರ್ಯಾಲಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com