ಹೆಣ್ಣಿಗಾಗಿ ಹುಲಿಗಳ ಭೀಕರ ಕಾದಾಟ, ವಿಡಿಯೋ ವೈರಲ್

ಹೆಣ್ಣು ಹುಲಿಯನ್ನು ಒಲಿಸಿಕೊಳ್ಳುವ ಸಲುವಾಗಿ 2 ಗಂಡು ಹುಲಿಗಳು ಕಾದಾಟ ನಡೆಸಿರುವ ರೋಚಕ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.

Published: 18th October 2019 02:39 PM  |   Last Updated: 18th October 2019 02:39 PM   |  A+A-


When two tigers fought over tigress

ಹುಲಿ ಕಾಳಗ

Posted By : Srinivasamurthy VN
Source : Online Desk

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ರೋಚಕ ದೃಶ್ಯ ಸೆರೆ

ಜೈಪುರ: ಹೆಣ್ಣು ಹುಲಿಯನ್ನು ಒಲಿಸಿಕೊಳ್ಳುವ ಸಲುವಾಗಿ 2 ಗಂಡು ಹುಲಿಗಳು ಕಾದಾಟ ನಡೆಸಿರುವ ರೋಚಕ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಅರಣ್ಯಾಧಿಕಾರಿ ಪರ್ವೀನ್ ಕಸ್ವಾನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಟಿ57 (ಸಿಂಗ್ಸ್ಥ) ಮತ್ತು ಟಿ58 (ರಾಕಿ) ಎಂಬ ಗಂಡು ಹುಲಿಗಳು ಹೆಣ್ಣು ಹುಲಿಗಾಗಿ ಕಾದಾಟ ನಡೆಸಿದ್ದು, ಈ ಕಾದಾಟವನ್ನು ಅಲ್ಲಿದ್ದ ಹೆಣ್ಣು ಹುಲಿ ವೀಕ್ಷಣೆ ಕೂಡ ಮಾಡಿದೆ. 

ಇನ್ನು ಕಾಳಗದ ಅಂತ್ಯದಲ್ಲಿ ಟಿ57 (ಸಿಂಗ್ಸ್ಥ) ಎಂಬ ಹುಲಿ ಗೆದ್ದಿದೆ ಎಂದು ವಿಡಿಯೋ ಟ್ವೀಟ್ ಮಾಡಿರುವ ಕಸ್ವಾನ್ ಮಾಹಿತಿ ನೀಡಿದ್ದಾರೆ. ಅಂತೆಯೇ ಈ ಭೀಕರ ಕಾಳಗದಲ್ಲಿ ಅದೃಷ್ಟವಶಾತ್ ಯಾವುದೇ ಹುಲಿಗಳೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಹನ್ಸರಾಜ್ ಗುರ್ಜರ್ ಎಂಬುವವರು ಸೆರೆ ಹಿಡಿದಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp