ಸಂಪ್ರದಾಯದ ಕಟ್ಟುಪಾಡು ಮುರಿದ ಯುವತಿ: ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ಕೆಲಸ!

ಸಮಾಜದ ಎಲ್ಲಾ ಕಟ್ಟು ಪಾಡುಗಳನ್ನು ಮುರಿದಿರುವ 20 ವರ್ಷದ ಹೈದರಾಬಾದ್ ಯುವತಿ ಸ್ವಿಗ್ಗಿ ಯಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. 
ಜನನಿ ರಾವ್
ಜನನಿ ರಾವ್

ಹೈದರಾಬಾದ್: ಸಮಾಜದ ಎಲ್ಲಾ ಕಟ್ಟು ಪಾಡುಗಳನ್ನು ಮುರಿದಿರುವ 20 ವರ್ಷದ ಹೈದರಾಬಾದ್ ಯುವತಿ ಸ್ವಿಗ್ಗಿ ಯಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. 

ತನ್ನ ದೈನಂದಿನ ಜೀವನದ ನಿರ್ವಹಣೆಗಾಗಿ ಹೈದರಾಬಾದ್ ನಿವಾಸಿಯಾಗಿರುವ ಜನನಿ ರಾವ್, ಸ್ವಿಗ್ಗಿ ಆನ್ ಲೈನ್ ಡೆಲಿವರಿ ಏಜೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಎರಡೂವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದು, ತನ್ನ ಕೆಲಸ ತುಂಬಾ ಆಸಕ್ತಿದಾಯಕವಾಗಿದೆ. ಹಲವು ರೀತಿಯ ವೈವಿದ್ಯಮಯವಾದ ಜನರನ್ನು ನಾನು ಮೀಟ್ ಮಾಡುತ್ತೇನೆ,. ಇದೊಂದು ರೀತಿಯ ವಿಶಿಷ್ಟ ರೀತಿಯ ಅನುಭವ ಎಂದು ಹೇಳಿದ್ದಾರೆ. 

ತಮ್ಮ ಕೆಲಸಕ್ಕೆ ಹಲವು ಗ್ರಾಹಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಹೆಣ್ಣು ಮಕ್ಕಳು ಈ ಫೀಲ್ಡ್ ನಲ್ಲೆ ಕೆಲಸ ಮಾಡಲು ಮುಂದೆ ಬಂದಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ, ಕೆಲಸ ಕೆಲಸ ಅಷ್ಟೇ, ಕೆಲಸದಲ್ಲಿ ದೊಡ್ಡದು ಚಿಕ್ಕದು ಎಂಬುದು ಇಲ್ಲಾ,ಯಾವುದು ನಿಮ್ಮ ಶ್ರಮಕ್ಕೆ ತಕ್ಕ ಹಣ ಕೊಡುತ್ತದೋ ಅದರಲ್ಲಿ ಕೆಲಸ ಮಾಡುವುದರಲ್ಲಿ ಏನು ತಪ್ಪಿಲ್ಲ ಎಂದು ಜನನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com