ಧೈರ್ಯವಿದ್ದರೆ 370 ವಿಧಿ ಪುನಃ ಸ್ಥಾಪಿಸುವುದಾಗಿ ಘೋಷಿಸಿ: ರಾಹುಲ್'ಗೆ ಅಮಿತಾ ಶಾ ಸವಾಲು

ಮತ್ತೆ ಅಧಿಕಾರಕ್ಕೆ ತಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿಯನ್ನು ಪುನಃ ಸ್ಥಾಪಿಸುವುದಾಗಿ ಧೈರ್ಯವಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಲಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸವಾಲು ಹಾಕಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ನವಪುರ್: ಮತ್ತೆ ಅಧಿಕಾರಕ್ಕೆ ತಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿಯನ್ನು ಪುನಃ ಸ್ಥಾಪಿಸುವುದಾಗಿ ಧೈರ್ಯವಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಲಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸವಾಲು ಹಾಕಿದ್ದಾರೆ. 

ನಂದುರ್ಬಾರ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ ಅವರು, ಬಹುಮತದ ಮೂಲಕ ನರೇಂದ್ರ ಮೋದಿಯವರು ಇದೇ ವರ್ಷ ಮೇ ತಿಂಗಳಿನಲ್ಲಿ ಮತ್ತೆ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಬಳಿಕ ಮೊದಲು ಮಾಡಿದ ಕೆಲಸವೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಮಾಡಿದ್ದು. 

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಇದ್ದ ಕಾರಣದಿಂದಲೇ ಪಾಕಿಸ್ತಾನ ಉಗ್ರರನ್ನು ಹುಟ್ಟಿಹಾಕಿತ್ತು. ಇದರ ಪರಿಣಾಮ 40,000 ಜನರು ಬಲಿಯಾದರು. ಕಾಂಗ್ರೆಸ್ ಪಕ್ಷದ ಮಿದುಳಿನಲ್ಲಿ ದೇಶದ ಹಿತಾಸಕ್ತಿ ಇಲ್ಲ. ಕೇವಲ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದರತ್ತ ಮಾತ್ರವೇ ಆ ಪಕ್ಷಕ್ಕೆ ಗಮನವಿದೆ. 

ಮಹಾರಾಷ್ಟ್ರ ರಾಜ್ಯಕ್ಕೂ 370 ವಿಧಿಗೂ ಏನು ಸಂಬಂಧವಿದೆ ಎಂದು ರಾಹುಲ್ ಕೇಳಿದ್ದಾರೆ. ಅವರಿಗೆ ಧೈರ್ಯವಿದ್ದರೆ, ಮತ್ತೆ ಅಧಿಕಾರಕ್ಕೆ ತಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಪುನಃ ಸ್ಥಾಪಿಸುವುದಾಗಿ ಘೋಷಿಸಲಿ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ದಿನ ಬಾಕಿಯಿದೆ ಎಂದು ಸವಾಲು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com