ತೆಲಂಗಾಣ ಬಂದ್: ಟಿಎಸ್ಆರ್'ಟಿಸಿ ನೌಕರರು-ಪೊಲೀಸರ ನಡುವೆ ಘರ್ಷಣೆ

ತೆಲಂಗಾಣದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಪ್ರತಿಭಟನೆ ವೇಳೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್ಆರ್'ಟಿಸಿ) ನೌಕರರು ಹಾಗೂ ಪೊಲೀಸರು ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ಶನಿವಾರ ತಿಳಿದುಬಂದಿದೆ. 
ತೆಲಂಗಾಣ ಬಂದ್: ಟಿಎಸ್ಆರ್'ಟಿಸಿ ನೌಕರರು-ಪೊಲೀಸರ ನಡುವೆ ಘರ್ಷಣೆ
ತೆಲಂಗಾಣ ಬಂದ್: ಟಿಎಸ್ಆರ್'ಟಿಸಿ ನೌಕರರು-ಪೊಲೀಸರ ನಡುವೆ ಘರ್ಷಣೆ

ಪರಕಲ (ತೆಲಂಗಾಣ): ತೆಲಂಗಾಣದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಪ್ರತಿಭಟನೆ ವೇಳೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್ಆರ್'ಟಿಸಿ) ನೌಕರರು ಹಾಗೂ ಪೊಲೀಸರು ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ಶನಿವಾರ ತಿಳಿದುಬಂದಿದೆ. 

ಟಿಎಸ್ಆರ್'ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ 15 ದಿನಕ್ಕೆ ಕಾಲಿಟ್ಟಿದ್ದು, ವರಂಗಲ್ ಜಿಲ್ಲೆಯ ಪರಕಲ ಟೌನ್ ನಲ್ಲಿ ಪ್ರತಿಭಟನಾ ನಿರತ ನೌಕರರು ಹಾಗೂ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ವರದಿಗಲು ತಿಳಿಸಿವೆ. 

ಪ್ರತಿಭಟನಾ ನಿರತ ನೌಕರರು ಹಾಗೂ ಇತರೆ ಪಕ್ಷಗಳ ನಾಯಕರು ಪರಕಲ ಬಸ್ ಡಿಪೋ ಬಳಿ ತೆರಳಿದ್ದು, ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಬಸ್ ಗಳನ್ನು ತಡೆಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ. ಪರಿಣಾಮ ಪೊಲೀಸರೊಂದಿಗೆ ನೌಕರರು ಮಾತಿನ ಚಕಮಕಿ ನಡೆಸಿದ್ದು, ಬಳಿಕ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ತಿಳಿದುಬಂದಿದೆ.
 
ಘರ್ಷಣೆ ವೇಳೆ ಕೆಲ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ಭದ್ರತೆಯೊಂದಿಗೆ ಬಸ್ ಗಳು ಸಂಚಾರ ನಡೆಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ನೌಕರರ ಬಂದ್ ಕರೆಗೆ ಹಲವು ವಿರೋಧ ಪಕ್ಷಗಳು ಬೆಂಬಲ ನೀಡಿದ್ದು, ಕೆಲ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com