ಜಾಗತಿಕ ಆರ್ಥಿಕ ಬಿಕ್ಕಟ್ಟು: ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಸಹಕಾರ ಬಲಪಡಿಸುವುದು ಅಗತ್ಯ- ನಿರ್ಮಲಾ ಸೀತಾರಾಮನ್‍ 

ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಮತ್ತು ಅಸಮತೋಲನಗಳ ಹಿನ್ನೆಲೆಯಲ್ಲಿ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಸಹಕಾರ ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Published: 20th October 2019 05:28 PM  |   Last Updated: 20th October 2019 05:28 PM   |  A+A-


Sitaraman

ಸೀತಾರಾಮನ್‍

Posted By : Srinivas Rao BV
Source : UNI

ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಮತ್ತು ಅಸಮತೋಲನಗಳ ಹಿನ್ನೆಲೆಯಲ್ಲಿ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಸಹಕಾರ ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿಸಿ ಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ 2019 ರ ವಾರ್ಷಿಕ ಸಭೆಗಳಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ವಿತ್ತ ಮತ್ತು ಹಣಕಾಸು ಸಮಿತಿ (ಐಎಂಎಫ್‌ಸಿ)ಯ  ಪೂರ್ಣಾಧಿವೇಶನದಲ್ಲಿ ಮಾತನಾಡಿ ಅವರು ಈ ವಿಷಯ ತಿಳಿಸಿದ್ದಾರೆ.  ದೇಶಗಳ ಹಣಕಾಸು, ವಿತ್ತೀಯ ಮತ್ತು ರಚನಾತ್ಮಕ ಕ್ರಮಗಳನ್ನು ಒಟ್ಟು ಸೇರಿಸಿ ಜಾರಿಗೊಳಿಸಲು ಸಮತೋಲಿತ ವಿಧಾನ ಅಳವಡಿಸಿಕೊಂಡರೆ, ದೇಶಗಳು ಅಭಿವೃದ್ಧಿ ಸಾಮರ್ಥ್ಯ ಸಾಧಿಸಲು ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp