ಮಹಾರಾಷ್ಟ್ರ ಚುನಾವಣೆ: ಆದಾಯ ತೆರಿಗೆಯಿಂದ 29 ಕೋಟಿ ನಗದು ವಶ!

ಮಹಾರಾಷ್ಟ್ರ ಚುನಾವಣಾ ಪ್ರಚಾರ ಆರಂಭಗೊಂಡ ಅಕ್ಟೋಬರ್ 21 ರಿಂದ ಈವರೆಗೂ ಲೆಕಕ್ಕೆ ಸಿಗದ ಸುಮಾರು 29 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರ ಚುನಾವಣಾ ಪ್ರಚಾರ ಆರಂಭಗೊಂಡ ಅಕ್ಟೋಬರ್ 21 ರಿಂದ ಈವರೆಗೂ ಲೆಕಕ್ಕೆ ಸಿಗದ ಸುಮಾರು 29 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆ ಬಿದ್ದಿದೆ. ಆದರೆ, ವಶಪಡಿಸಿಕೊಂಡ ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಆದಾಯ ತೆರಿಗೆ ಇಲಾಖೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ.

ಮುಂಬೈಯ 36 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಕ್ರಮ ಹಣ ಮತ್ತಿತರ ಮೌಲ್ಯಯುತ ವಸ್ತುಗಳು ಸಾಗಣೆಯಾಗದಂತೆ ಗಮನ ನೀಡಲಾಗಿತ್ತು. ಇದನ್ನು ತಡೆಗಟ್ಟುವ ಸಲುವಾಗಿ ಕ್ಷಿಪ್ರ ಕಾರ್ಯ ಪಡೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಮತದಾರರು ಅಕ್ರಮ ಹಣ ಹಾಗೂ ಬೆಲೆಬಾಳುವ  ವಸ್ತುಗಳನ್ನು ಇಟ್ಟಕೊಳ್ಳದಂತೆ  ಚುನಾವಣಾ ಆಯೋಗ ಕೂಡಾ ನೆರವು ನೀಡುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com