ಪಿಎಂಸಿ ಬ್ಯಾಂಕ್: ಪ್ರಧಾನಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು: ಕಪಿಲ್ ಸಿಬಲ್

ದೇಶದ್ಯಾಂತ ತೀವ್ರ ಸಂಚಲನ ಸೃಷ್ಟಿಸಿರುವ ಪಂಜಾಬ್-ಮಹಾರಾಷ್ಟ್ರ ಕೋ- ಅಪರೇಟಿವ್ (ಪಿಎಮ್‌ಸಿ) ಬ್ಯಾಂಕ್ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್‌ ಸಿಬಲ್ ಒತ್ತಾಯಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ್ಯಾಂತ ತೀವ್ರ ಸಂಚಲನ ಸೃಷ್ಟಿಸಿರುವ ಪಂಜಾಬ್-ಮಹಾರಾಷ್ಟ್ರ ಕೋ- ಅಪರೇಟಿವ್ (ಪಿಎಮ್‌ಸಿ) ಬ್ಯಾಂಕ್ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್‌ ಸಿಬಲ್ ಒತ್ತಾಯಿಸಿದ್ದಾರೆ.

ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿಗೆ ಪರಿಹಾರ ಕಲ್ಪಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿ, ಬದ್ದತೆ ಪ್ರದರ್ಶಿಸಬೇಕು. ಬ್ಯಾಂಕಿನ 12 ಮಂದಿ ನಿರ್ದೇಶಕರು ಬಿಜೆಪಿಗೆ ಸೇರಿದವರಾಗಿದ್ದಾರೆ. ಹಾಗಾಗಿ ಅವರನ್ನು ಸಿಬಿಐ ಬಂಧಿಸುವುದಿಲ್ಲ. ಕೇಸರಿ ಪಕ್ಷಕ್ಕೆ ಸೇರಿರುವ ಕಾರಣ ಜಾರಿ ನಿರ್ದೇನಾಲಯ ಖಂಡಿತ ಕೂಡಾ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಿಬಲ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಸಂವಿಧಾನ 370ನೇ ವಿಧಿ ಕುರಿತು ಯೋಚಿಸುವುದರ ಬದಲು ಪಿಎಂಸಿ ಬಿಕ್ಕಟ್ಟಿನಿಂದ ಹಣಕಳೆದುಕೊಂಡಿರುವ ಠೇವಣಿದಾರರು, ಗ್ರಾಹಕರ ಜೀವಗಳನ್ನು ಉಳಿಸುವತ್ತ ಗಮನ ಹರಿಸಬೇಕು. ಈ ವಿಷಯದ ಬಗ್ಗೆ ಪ್ರಧಾನಿ ಸ್ಪಷ್ಟ ಭರವಸೆ ನೀಡಬೇಕು ಎಂದು ಸಿಬಲ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com