ಗಡಿಯಲ್ಲಿ ಬಿಗುವು; ರಕ್ಷಣಾ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ದರ್ ವಲಯದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಮುನ್ಸೂಚನೆ ನೀಡದೆ, ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ನೆಲೆಗೊಂಡಿದೆ ಎಂದು ವರದಿಯಾಗಿದೆ. 
ಗಡಿಯಲ್ಲಿ ಬಿಗುವು; ರಕ್ಷಣಾ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ
ಗಡಿಯಲ್ಲಿ ಬಿಗುವು; ರಕ್ಷಣಾ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ

ನವದೆಹಲಿ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ದರ್ ವಲಯದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಮುನ್ಸೂಚನೆ ನೀಡದೆ, ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ನೆಲೆಗೊಂಡಿದೆ ಎಂದು ವರದಿಯಾಗಿದೆ. 

ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಮಾಹಿತಿ ಒದಗಿಸಲಾಗಿದ್ದು, ಖುದ್ದು ರಕ್ಷಣಾ ಸಚಿವರೇ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್  ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ, ಸಚಿವ ರಾಜನಾಥ್ ಸಿಂಗ್ ಗಡಿಯಲ್ಲಿನ  ಪರಿಸ್ಥಿತಿಯ ಬಗ್ಗೆ  ಮಾಹಿತಿ ಪಡೆದುಕೊಂಡು, ತಾಜಾ ಬೆಳವಣಿಗೆಗಳ ಕುರಿತು ಆಗಾಗ್ಗೆ ಮಾಹಿತಿ ನೀಡುವಂತೆ ತಾಕೀತು ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ನಡೆಸಿದ ನಂತರ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ನುಸುಳುಕೋರರನ್ನು ಭಾರತೀಯ ಗಡಿಯೊಳಗೆ ನುಗ್ಗಿಸುವ ಪಾಕಿಸ್ತಾನದ ಪಿತೂರಿಯನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿವೆ. ಪಾಕಿಸ್ತಾನ ಪಡೆಗಳ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ತಂಗ್ಧಾರ್ ವಲಯದ ಗಡಿ ನಿಯಂತ್ರಣ ರೇಖೆಯ ಎದುರಿರುವ  ಪಾಕ್ ಅಕ್ರಮಿತ ಕಾಶ್ಮೀರ  ಪ್ರದೇಶದಲ್ಲಿರುವ ನಾಲ್ಕು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಮಾರು 15 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ, ಪಾಕಿಸ್ತಾನ, ಒಂಬತ್ತು ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಾಗಿ ಮತ್ತು ಎರಡು ಭಾರತೀಯ ಬಂಕರ್ ಗಳನ್ನು ನಾಶಗೊಳಿಸಿರುವುದಾಗಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com