ಪ್ರಧಾನಿ ಮೋದಿ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಸೊಸೆ ಗರಂ!

ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ ಉಪಾಸನಾ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Published: 20th October 2019 03:53 PM  |   Last Updated: 20th October 2019 03:53 PM   |  A+A-


Ram Charan's wife Upasana expresses displeasure over Modi

ಪ್ರಧಾನಿ ಮೋದಿ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಸೊಸೆ ಗರಂ!

Posted By : Srinivas Rao BV
Source : Online Desk

ನವದೆಹಲಿ: ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ ಉಪಾಸನಾ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳನ್ನು ಮಾತ್ರ ಭೇಟಿಯಾಗಿದ್ದಾರೆ ಎಂದು ಉಪಾಸನ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ನಾವು ದಕ್ಷಿಣ ಭಾರತೀಯರು ನಿಮ್ಮನ್ನು ಮೆಚ್ಚಿದ್ದೇವೆ, ಹಾಗೂ ನಿಮ್ಮನ್ನು ಪ್ರಧಾನಿಯಾಗಿ ಪಡೆದಿರುವುದಕ್ಕೆ ಹೆಮ್ಮೆ ಇದೆ. ಆದರೆ ಸಾಂಸ್ಕೃತಿಕ ಐಕಾನ್ ಗಳು ಪ್ರಮುಖ ವ್ಯಕ್ತಿಗಳ ಪ್ರಾತಿನಿಧ್ಯ  ಕೇವಲ ಹಿಂದಿ ಸಿನಿಮಾ ಇಂಡಸ್ಟ್ರಿಗೆ ಸೀಮಿತವಾಗಿದೆ ಎನಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಉಪಾಸನಾ ಟ್ವೀಟ್ ನಲ್ಲಿ ಬರೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಶನಿವಾರ ಚೇಂಜ್ ವಿಥಿನ್ ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರಟಿಗಳನ್ನು ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಣಾವತ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಹಲವು ಸಿನಿಮಾ ಹಾಗೂ ಕಿರು ತೆರೆಯ ಗಣ್ಯರು ಭಾಗವಹಿಸಿದ್ದರು. ಈ ವಿಷಯವನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp