ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮನೋಸ್ಥಿತಿ ಬದಲಾಗಬೇಕು: ವೆಂಕಯ್ಯ ನಾಯ್ಡು

ವೃದ್ಧರನ್ನು ನಿರ್ಲಕ್ಷ್ಯಿಸಲಾಗುತ್ತಿದ್ದು, ಅವರು ದೈಹಿಕ, ಮೌಖಿಕ ಮತ್ತು ಭಾವನಾತ್ಮಕ ನಿಂದನೆಯನ್ನು ಎದುರಿಸುತ್ತಿದ್ದು, ಸಮಾಜದಲ್ಲಿ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮನೋಸ್ಥಿತಿ ಬದಲಾಗಬೇಕು...
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ನವದೆಹಲಿ: ವೃದ್ಧರನ್ನು ನಿರ್ಲಕ್ಷ್ಯಿಸಲಾಗುತ್ತಿದ್ದು, ಅವರು ದೈಹಿಕ, ಮೌಖಿಕ ಮತ್ತು ಭಾವನಾತ್ಮಕ ನಿಂದನೆಯನ್ನು ಎದುರಿಸುತ್ತಿದ್ದು, ಸಮಾಜದಲ್ಲಿ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮನೋಸ್ಥಿತಿ ಬದಲಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ.

ಭಾನುವಾರ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ವಿದ್ವಾಂಸ ಮತ್ತು ಮಾಜಿ ಅಟಾರ್ನಿ ಜನರಲ್ ಕೆ ಪರಾಸರನ್ ಅವರಿಗೆ 'ಅತ್ಯಂತ ಶ್ರೇಷ್ಠ ಹಿರಿಯ ನಾಗರಿಕ ಪ್ರಶಸ್ತಿ' ನೀಡಿ, ಗೌರವಸಿ ಮಾತನಾಡಿದ ಉಪ ರಾಷ್ಟ್ರಪತಿಯವರು, ವೃದ್ಧರನ್ನು ನೋಡುವ ಮೋನೋಸ್ಥಿತಿ ಸಮಾಜದಲ್ಲಿ ಮುಖ್ಯವಾಗಿ ಯುವಕರಲ್ಲಿ ಬದಲಾಗಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹಿರಿಯರ ದಿನಾಚರಣೆಯ ಸಂದರ್ಭದಲ್ಲಿ ವೃದ್ಧರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಏಜ್ ಕೇರ್ ಇಂಡಿಯಾ ವತಿಯಿಂದ ಪರಾಸರನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪರಾಸರನ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ‘92ನೇ ವಯಸ್ಸಿನಲ್ಲಿ ಪರಾಸರನ್ ಅವರು ಕಾನೂನಿನ ಜ್ಞಾನ, ಶಾಸ್ತ್ರಗಳ ಜ್ಞಾನ, ಪಾಂಡಿತ್ಯ ಮತ್ತು ನೀತಿಶಾಸ್ತ್ರದ ವಿಷಯದಲ್ಲಿ ಎತ್ತರದಲ್ಲಿ ನಿಂತಿದ್ದಾರೆ. ಭಾರತದ ಸಂಪೂರ್ಣ ಉದ್ದ ಮತ್ತು ಅಗಲದ ನಡುವೆ ಎತ್ತರವಾಗಿ ನಿಂತಿದ್ದಾರೆ ಎಂದು ಹೇಳಿದರು.

ಈ ಪ್ರಶಸ್ತಿಯು ಪರಾಸರನ್ ಕಾನೂನು ಮತ್ತು ನ್ಯಾಯ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆ ಹಾಗೂ ಅವರ ಅಸಾಮಾನ್ಯ ವ್ಯಕ್ತಿತ್ವಯನ್ನು ಗುರುತಿಸುತ್ತದೆ. ಇಂದಿನ ಕಾರ್ಯಕ್ರಮ, "ಧರ್ಮ" ಮತ್ತು "ನ್ಯಾಯ" ಎರಡನ್ನೂ ಮಿಶ್ರಣ ಮಾಡಲು ಪ್ರಯತ್ನಿಸಿದ ಆಧ್ಯಾತ್ಮಿಕ ಕಾನೂನು ಸಾಧಕರ ನಂಬಲಾಗದ ಸಕಾರಾತ್ಮಕ ಶಕ್ತಿಯ ಆಚರಣೆಯಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com