ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 141 ಕೈದಿಗಳಿಗೆ ಬಿಡುಗಡೆ ಭಾಗ್ಯ

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 141 ಕೈದಿಗಳನ್ನು ರಾಜ್ಯಪಾಲರ ಅಂಗೀಕಾರದೊಂದಿಗೆ ಇಂದು ಬಿಡುಗಡೆ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹ
ಪರಪ್ಪನ ಅಗ್ರಹಾರ ಕಾರಾಗೃಹ

ಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 141 ಕೈದಿಗಳನ್ನು ರಾಜ್ಯಪಾಲರ ಅಂಗೀಕಾರದೊಂದಿಗೆ ಇಂದು ಬಿಡುಗಡೆ ಮಾಡಲಾಗಿದೆ.

ಪರಪ್ಪರ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಂದು ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಂಡ ಕೈದಿಗಳಿಗೆ ಕಿಟ್ ನೀಡಿ, ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಸೂಚಿಸಿದರು.

ಬೆಂಗಳೂರು ಕಾರಾಗೃಹದ 71, ಮೈಸೂರು 23, ಬೆಳಗಾವಿ 5, ವಿಜಯಪುರದ 6, ಬಳ್ಳಾರಿಯ 11, ಧಾರವಾಡ ಜೈಲಿನ 11 ಸೇರಿ ಒಟ್ಟು 141 ಕೈದಿಗಳಿಗೆ ಪ್ರಸ್ತುತ ಸಾಲಿನಲ್ಲಿ ಬಿಡುಗಡೆ ಭಾಗ್ಯ ದೊರೆತಿದೆ.

ಮೈಂಡ್ ಟ್ರೀ ಫೌಂಡೇಶನ್ ಮತ್ತು ರೇಡಿಯೋ ಸಿಟಿ ಎಂಎಫ್ 91.1 ಅವರ ಸಹಯೋಗದೊಂದಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬೆಂಗಳೂರು ರೇಡಿಯೋ ಕೇಂದ್ರವನ್ನು ಪ್ರಾರಂಭಿಸುತ್ತಿದೆ.

ಸ್ಯಾನ್ ಐಟಿ ಸೆಲ್ಯೂಷನ್ ವತಿಯಿಂದ  ಕೇಂದ್ರ ಕಾರಾಗೃಹದ ಬಂಧಿಗಳಿಗೆ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸುತ್ತಿದ್ದು, ಈ ತರಬೇತಿಗಳಿಂದ ಬಂಧಿಗಳ ಕೌಶಲ್ಯ ಅಭಿವೃದ್ಧಿಯ ಜೊತೆಗೆ ಮನಃ ಪರಿವರ್ತನೆ ಮತ್ತು ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗಿರುತ್ತದೆ. ಸ್ಯಾನ್ ಐಟಿ ಸಲ್ಯೂಷನ್ , ಗೂಡ್ಸ್ ಆಂಡ್ ಕ್ಯಾಪಿಟಲ್ ಸರ್ವೀಸಸ್, ಹಾಸ್ಪಿಟಾಲಿಟಿ ಮತ್ತು ಆಪರೇಲ್ಸ್ ವಿಭಾಗಗಳಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ.

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿಗಳ ಸುಧಾರಣಾ ಸೇವಾ ಪ್ರಶಸ್ತಿ ಹಾಗೂ 2017ನೆ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ನೀಡಲಾಯಿತು.

ಕೋಲಾರ ಜೈಲರ್ ಎಂ.ಎಸ್. ಹೊಸೂರು ಅವರಿಗೆ ರಾಷ್ಟ್ರಪತಿ ಸುಧಾರಣಾ ಸೇವಾ ಪದಕ ಪ್ರದಾನ ಮಾಡಲಾಯಿತು. ದೇವನಹಳ್ಳಿ ಬಯಲು ಕಾರಾಗೃಹ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಎಸ್.ಮಾಳಿ, ಯಾದಗಿರಿ ಸಹಾಯಕ ಅಧೀಕ್ಷಕ ಶಹಾಬುದ್ದೀನ್ ಎಂ.ಕಾಲೇಖಾನ್, ಹಾವೇರಿ ಜೈಲರ್ ಟಿ.ಬಿ.ಭಜಂತ್ರಿ, ಕಲಬುರಗಿ ಜೈಲರ್ ಗೋಪಾಲ ಕೃಷ್ಣ ಕುಲಕರ್ಣಿ, ಪ್ರಧಾ ಕಚೇರಿಯ ಜೈಲರ್ ಎಂ.ವೆಂಕಟೇಶ್, ಬೆಂಗಳೂರು ಜೈಲರ್ ಎಸ್.ವೈ.ಕುರಿ, ಬೀದರ್ ಸಹಾಯಕ ಜೈಲರ್ ಪ್ರಾಣೇಶ್  ಅನಂತ್ ರಾವ್ ಕುಲಕರ್ಣಿ, ಬೆಂಗಳೂರು ಮುಖ್ಯ ವೀಕ್ಷಕ ಎಂ.ಎಸ್.ಲೋಕೇಶ್ ನಾಯಕ್, ಬೆಳಗಾವಿ ಮುಖ್ಯ ವೀಕ್ಷಕ ಪ್ರಕಾಶ್ ಕಾಂಬ್ಳೆ, ಪ್ರಧಾನ ಕಚೇರಿಯ ಮುಖ್ಯ ವೀಕ್ಷಕ ಟಿ.ವಿ.ಪ್ರಸಾದ್ ಅವರಿಗೆ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com