ಲಿವ್-ಇನ್ ರಿಲೇಷನ್ ಶಿಪ್: ವ್ಯಕ್ತಿಯ ಅಧಿಕೃತ ಪತ್ನಿಗೆ 70 ಲಕ್ಷ ಪರಿಹಾರ ನೀಡುವಂತೆ ಮಾಡೆಲ್ ಗೆ ಮಣಿಪುರ ಕೋರ್ಟ್ ಆದೇಶ

ಲಿವ್-ಇನ್ ರಿಲೇಷನ್ ಶಿಪ್ ಹೊಂದಿದ್ದ ವ್ಯಕ್ತಿಯ ಕಾನೂನುಬದ್ಧ ಹೆಂಡತಿಗೆ 70 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆತನೊಂದಿಗೆ ಲಿವ್ -ಇನ್ ರಿಲೇಷನ್ ಶಿಪ್ ನಲ್ಲಿದ್ದ ಮಾಡೆಲ್ ಗೆ ಮಣಿಪುರ ಕೋರ್ಟ್ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹತಿ: ಲಿವ್-ಇನ್ ರಿಲೇಷನ್ ಶಿಪ್ ಹೊಂದಿದ್ದ ವ್ಯಕ್ತಿಯ ಕಾನೂನುಬದ್ಧ ಹೆಂಡತಿಗೆ 70 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆತನೊಂದಿಗೆ ಲಿವ್ -ಇನ್ ರಿಲೇಷನ್ ಶಿಪ್ ನಲ್ಲಿದ್ದ ಮಾಡೆಲ್ ಗೆ ಮಣಿಪುರ ಕೋರ್ಟ್ ಆದೇಶಿಸಿದೆ.

ಇಂಫಾಲ್ ಈಸ್ಟ್‌ನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ಈ ಐತಿಹಾಸಿಕ ತೀರ್ಪು ನೀಡಿದ್ದು, ಡಾ. ಕೊನ್ಸಮ್ ಶ್ಯಾಮ್‌ಸುಂದರ್ ಅವರೊಂದಿಗೆ ಲಿವ್-ಇನ್ ರಿಲೇಷನ್ ಹೊಂದಿದ್ದ ಖ್ಯಾತ ಮಾಡೆಲ್, ಯಂಬೆಮ್ ಪುಣಿ ಅವರಿಗೆ, ಶ್ಯಾಮ್‌ಸುಂದರ್ ಅವರ ಕಾನೂನುಬದ್ಧ ಪತ್ನಿ ಡಾ. ರಂಜಿತಾ ಅಚೋಮ್ ಅವರಿಗೆ 70 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಸಮಾಜದ ದೃಷ್ಟಿಯಲ್ಲಿ “ಕಾನೂನುಬದ್ಧ ಹೆಂಡತಿಯ ಗೌರವಕ್ಕೆ ಕಡಿಮೆ ಮಾಡಿದ್ದಕ್ಕಾಗಿ” 10 ಲಕ್ಷ ರೂ ಹಾಗೂ ಆಘಾತ ಮತ್ತು ಮಾನಸಿಕ ತೊಂದರೆ ನೀಡಿದ್ದಕ್ಕಾಗಿ 10 ಲಕ್ಷ ರೂ ಮತ್ತು “ಶಿಕ್ಷಾರ್ಹ ಅಥವಾ ಅನುಕರಣೀಯ ಹಾನಿಗಳಿಗೆ” 50 ಲಕ್ಷ  ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್, ಮಾಡೆಲ್ ಗೆ ಆದೇಶಿಸಿದೆ.

ಡಾ. ರಂಜಿತಾ ಹಾಗೂ ಡಾ. ಶ್ಯಾಮ್‌ಸುಂದರ್ ಅವರು 2009ರಲ್ಲಿ ಮದುವೆಯಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ. 41 ವರ್ಷದ ರಂಜಿತಾ ಅವರು ಜವಾಹರ್ ಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಪತಿ ಶ್ಯಾಮ್ ಸುಂದರ್ ಅವರು ಮಣಿಪುರ ಸರ್ಕಾರದಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ.

33 ವರ್ಷದ ಮಾಡೆಲ್ ಪುಣಿ ಅವರು, ಮಣಿಪುರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿರುವ ತನ್ನ ಪತಿ ಶ್ಯಾಮ್‌ಸುಂದರ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ರಂಜಿತಾ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ 10 ಕೋಟಿ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಅಂತಿಮವಾಗಿ 70 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com