ಕರ್ನಾಟಕದ ಕರಾವಳಿ ಭಾಗ, ಆಂಧ್ರ ಪ್ರದೇಶ ದಲ್ಲಿ ಇಂದು ಭಾರೀ ಮಳೆ: ಹವಾಮಾನ ಇಲಾಖೆ 

ಕರಾವಳಿ ಕರ್ನಾಟಕ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಮ್ ಗಳಲ್ಲಿ ಬುಧವಾರ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕರಾವಳಿ ಕರ್ನಾಟಕ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಮ್ ಗಳಲ್ಲಿ ಬುಧವಾರ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


ಒಡಿಶಾ, ಕೊಂಕಣ್, ಗೋವಾ, ತೆಲಂಗಾಣ, ರಾಯಲಸೀಮೆ, ಕರ್ನಾಟಕದ ಒಳನಾಡು, ಕೇರಳ ಮತ್ತು ಮಾಹೆಗಳಲ್ಲಿ ಕೂಡ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲದೆ ಛತ್ತೀಸ್ ಗಢ, ಮಧ್ಯ ಮಹಾರಾಷ್ಟ್ರ, ಮರತ್ ವಾಡೆ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಗಳಲ್ಲಿ ದಿನವಿಡೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.


ದೆಹಲಿಯಲ್ಲಿ ಇಂದು ವಾತಾವರಣ ಶುಭ್ರವಾಗಿದ್ದು ಗರಿಷ್ಠ ಮತ್ತು ಕನಿಷ್ಠ ಹವಾಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು 23 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಜಮ್ಮು-ಕಾಶ್ಮೀರ, ವಿದರ್ಭ, ಛತ್ತೀಸ್ ಗಢ, ಬಿಹಾರ, ಜಾರ್ಖಂಡ್, ಗ್ಯಾಂಗೆಟಿಕ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗುಡುಗಿನಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ವರದಿ ಹೇಳಿದೆ.


ಗಂಟೆಗೆ 45ರಿಂದ 55 ಕಿಲೋ ಮೀಟರ್ ವೇಗದಲ್ಲಿ ಪೂರ್ವ ಕೇಂದ್ರ ಅರೇಬಿಯನ್ ಸಮುದ್ರದಿಂದ ಗಾಳಿ ಬೀಸಿ ಮಹಾರಾಷ್ಟ್ರ-ಗೋವಾ ಕರ್ನಾಟಕ-ಕೇರಳ ಕರಾವಳಿ, ಲಕ್ಷದ್ವೀಪ ಪ್ರದೇಶ ಮತ್ತು ಉತ್ತರ ತಮಿಳುನಾಡು-ಆಂಧ್ರ ಪ್ರದೇಶ-ಒಡಿಶಾ ತೀರದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಮುಂದಿನ ಎರಡು-ಮೂರು ದಿನಗಳವರೆಗೆ ಮೀನುಗಾರರು ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com