ಮಹಾರಾಷ್ಟ್ರ ಚುನಾವಣಾ ಫಲಿತಾಂಶ 2019: ಅನಿರೀಕ್ಷಿತ ಸೋಲಿನ ಅಘಾತದಿಂದ ಕಣ್ಣೀರಿಟ್ಟ ಪಂಕಜಾ ಮುಂಧೆ! 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ-ಶಿವಸೇನೆ ಮೈತ್ರಿ ಮತ್ತೆ ಅಧಿಕಾರಕ್ಕೇರಿದೆ. ಆದರೆ ಮಹಾರಾಷ್ಟ್ರದ ಬಿಜೆಪಿಯ ಹಲವು ಖ್ಯಾತ ನಾಮರು ಸೋಲು ಕಂಡಿದ್ದಾರೆ. ಈ ಪೈಕಿ ಮಾಜಿ ಸಚಿವೆ ಪಂಕಜಾ ಮುಂಧೆ ಅವರೂ ಒಬ್ಬರು. 
ಪಂಕಜ ಮುಂಧೆ
ಪಂಕಜ ಮುಂಧೆ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ-ಶಿವಸೇನೆ ಮೈತ್ರಿ ಮತ್ತೆ ಅಧಿಕಾರಕ್ಕೇರಿದೆ. ಆದರೆ ಮಹಾರಾಷ್ಟ್ರದ ಬಿಜೆಪಿಯ ಹಲವು ಖ್ಯಾತ ನಾಮರು ಸೋಲು ಕಂಡಿದ್ದಾರೆ. ಈ ಪೈಕಿ ಮಾಜಿ ಸಚಿವೆ ಪಂಕಜಾ ಮುಂಧೆ ಅವರೂ ಒಬ್ಬರು. 

ಪರ್ಲಿಯಿಂದ ಸ್ಪರ್ಧಿಸಿದ್ದ ಎನ್ ಸಿಪಿಯಲ್ಲಿರುವ ತಮ್ಮ ಸೋದರ ಸಂಬಂಧಿ ಧನಂಜಯ್ ಮುಂಧೆ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಪಂಕಜಾ ಮುಂಧೆ ಕಣ್ಣೀರು ಹಾಕಿದ್ದಾರೆ. 

ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುನ್ನವೇ ಪಂಕಜಾ ಮುಂಧೆ ಸೋಲನ್ನು ಒಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ನಾನು ಜನತೆಯ ತೀರ್ಪನ್ನು ಗೌರವಿಸುತ್ತೇನೆ, ಅವರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ, ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಗದ್ಗದಿತ ಧ್ವನಿಯಲ್ಲಿ ಪಂಕಜಾ ಹೇಳಿದ್ದಾರೆ. 

ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಸಚಿವ ಸಂಪುಟದಲ್ಲಿ ಪಂಕಜಾ ಮುಂಧೆ ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

2014 ರ ಮಹಾರಾಷ್ಟ್ರ ಚುನಾವಣೆಯಲ್ಲಿ ಪಂಕಜಾ ಮುಂಡೆ ಧನಂಜಯ್ ಮುಂಧೆ ವಿರುದ್ಧ ಗೆದ್ದಿದ್ದರು. 2009 ರಲ್ಲಿ ಧನಂಜಯ್ ಮುಂಧೆ ಗೋಪಿನಾಥ್ ಮುಂಧೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ತೊರೆದು ಎನ್ ಸಿಪಿ ಸೇರ್ಪಡೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com