ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶದ ದಿನ ಬರೊಬ್ಬರಿ 3.2 ಮಿಲಿಯನ್ ಟ್ವೀಟ್!

ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶದ ದಿನದಂದು ಸಾಮಾಜಿಕ ಜಾಲತಾಣಗಳು ಎಂದಿಗಿಂತಲೂ ಹೆಚ್ಚು ಸಕ್ರಿಯವಾಗಿದ್ದವು. 
ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶದ ದಿನ ಬರೊಬ್ಬರಿ 3.2 ಮಿಲಿಯನ್ ಟ್ವೀಟ್!
ಮಹಾರಾಷ್ಟ್ರ, ಹರ್ಯಾಣ ಚುನಾವಣಾ ಫಲಿತಾಂಶದ ದಿನ ಬರೊಬ್ಬರಿ 3.2 ಮಿಲಿಯನ್ ಟ್ವೀಟ್!

ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶದ ದಿನದಂದು ಸಾಮಾಜಿಕ ಜಾಲತಾಣಗಳು ಎಂದಿಗಿಂತಲೂ ಹೆಚ್ಚು ಸಕ್ರಿಯವಾಗಿದ್ದವು. ಫಲಿತಾಂಶದ ದಿನದಂದು ದಾಖಲಾದ ಟ್ವೀಟ್ ಗಳ ಬಗ್ಗೆ ಟ್ವಿಟರ್ ಮಾಹಿತಿ ಬಹಿರಂಗಗೊಳಿಸಿದ್ದು. 3.2 ಮಿಲಿಯನ್ ಟ್ವೀಟ್ ಗಳು ದಾಖಲಾಗಿವೆ ಎಂದು ಹೇಳಿದೆ. 

ಸಾಮಾನ್ಯವಾಗಿ ಟ್ವಿಟರ್ ನಲ್ಲಿ ಚುಟುಕಾಗಿ ಗಂಭೀರವಾದ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿರುತ್ತವೆ. ಈಗ ಚುನಾವಣಾ ಫಲಿತಾಂಶದ ದಿನ ಟ್ವಿಟರ್ ತನ್ನ ವೇದಿಕೆಯಲ್ಲಿ 3.2 ಮಿಲಿಯನ್ ಟ್ವೀಟ್ ಗಳು ದಾಖಲಾಗುವ ಮೂಲಕ ಅರ್ಥಪೂರ್ಣ ರಾಜಕೀಯ ಚರ್ಚೆ ನಡೆಸುವವರಿಗೆ ಸಾಮಾಜಿಕ ಜಾಲತಾಣದ ಹಬ್ ಆಗಿದೆ ಎಂದು ಹೇಳಿಕೊಂಡಿದೆ. 

ದೇವೇಂದ್ರ ಫಡ್ನವೀಸ್, ಮನೋಹರ್ ಲಾಲ್ ಖಟ್ಟರ್, ಆದಿತ್ಯ ಠಾಕ್ರೆ, ಶರದ್ ಪವಾರ್, ಸುಭಾಶ್ ಬರಾಲ ಅವರ ಹೆಸರನ್ನು ಟ್ವಿಟರ್ ನಲ್ಲಿ ಹೆಚ್ಚು ಉಲ್ಲೇಖಿಸಲಾಗಿತ್ತು. 

ಮಹಾರಾಷ್ಟ್ರದ ರಾಜಕೀಯ ಪಕ್ಷಗಳ ಪೈಕಿ ಟ್ವಿಟರ್ ನಲ್ಲಿ ಬಿಜೆಪಿ ಶಿವಸೇನೆ ಮೈತ್ರಿಯ ಬಗ್ಗೆ ಶೇ.38 ರಷ್ಟು ಟ್ವೀಟ್ ಗಳಿದ್ದರೆ, ಎನ್ ಸಿಪಿ-ಕಾಂಗ್ರೆಸ್ ಮೈತ್ರಿಯ ಕುರಿತು ಶೇ.33 ರಷ್ಟು ಟ್ವೀಟ್ ಗಳಿದ್ದವು. ಹರ್ಯಾಣ ರಾಜಕೀಯಕ್ಕೆ ಸಂಬಂಧಿಸಿದಂತೆ ಬಂದಿದ್ದ ಟ್ವೀಟ್ ಗಳಲ್ಲಿ ಶೇ.54 ರಷ್ಟು ಬಿಜೆಪಿ ಕುರಿತಾಗಿದ್ದರೆ, ಶೇ.40 ರಷ್ಟು ಮಂದಿ ಕಾಂಗ್ರೆಸ್ ಪಕ್ಷದ ಬಗ್ಗೆ ಉಲ್ಲೇಖಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com