ಹರ್ಯಾಣ ಮೈತ್ರಿ ಸರ್ಕಾರ ಖಚಿತ: ಖಟ್ಟರ್ ಸಿಎಂ ಚೌಟಾಲಾಗೆ ಡಿಸಿಎಂ ಪಟ್ಟ

ಹರಿಯಾಣದ ಜನಾದೇಶವನ್ನು ಗೌರವಿಸಿ ಬಿಜೆಪಿ ಹಾಗೂ ಜೆಜೆಪಿ ಒಟ್ಟಾಗಿ ಸರ್ಕಾರ ರಚಿಸಲು ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 
ಹರ್ಯಾಣ ಮೈತ್ರಿ ಸರ್ಕಾರ ಖಚಿತ: ಖಟ್ಟರ್ ಸಿಎಂ ಚೌಟಾಲಾಗೆ ಡಿಸಿಎಂ ಪಟ್ಟ

ನವದೆಹಲಿ: ಹರಿಯಾಣದ ಜನಾದೇಶವನ್ನು ಗೌರವಿಸಿ ಬಿಜೆಪಿ ಹಾಗೂ ಜೆಜೆಪಿ ಒಟ್ಟಾಗಿ ಸರ್ಕಾರ ರಚಿಸಲು ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

ಇಂದು ಅಮಿತ್ ಶಾ ಹಾಗೂ ಜನನಾಯಕ ಜನತಾ ಪಕ್ಷದ ಮುಖ್ಯಸ್ಥ ದುಶ್ಯಂತ್ ಚೌಟಾಲಾ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಶಾ ಮಾದ್ಯಮದವರೊಂದಿಗೆ ಮಾತನಾಡಿದ್ದಾರೆ.

"ಹರಿಯಾಣದ ಜನಾದೇಶವನ್ನು ಅಂಗೀಕರಿಸಿ, ಎರಡೂ ಪಕ್ಷಗಳ ನಾಯಕರು (ಬಿಜೆಪಿ-ಜೆಜೆಪಿ) ಒಟ್ಟಾಗಿ ಸರ್ಕಾರ ರಚಿಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದರೆ ಜೆಜೆಪಿಯವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ" ಶಾ ಹೇಳಿದರು.

ಕೆಲವೇ ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಚೌಟಾಲಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಇದೆ

ಏತನ್ಮಧ್ಯೆ ಸ್ವತಂತ್ರ ಶಾಸಕರು ಕೂಡ ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂದು ಶಾ ಹೇಳಿದರು

ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಉದ್ದೇಶದಿಂದ ಸಭೆ ಕರೆಯಲಾಗಿದ್ದು ಭೆಯ ನಂತರ ಸರ್ಕಾರ ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಶಾ ಹೇಳಿದರು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಹುಮತಕ್ಕೆ ಕೇವಲ ಆರು ಸ್ಥಾನಗಳು ಕಡಿಮೆ ಇದೆ.

ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಬೆಂಬಲ: ಚೌಟಾಲಾ

ಹರಿಯಾಣದಲ್ಲಿ ಸ್ಥಿರ ಸರ್ಕಾರ ನೀಡಲು ಭಾರತೀಯ ಜನತಾ ಪಕ್ಷ ಮತ್ತು ಜನನಾಯಕ ಜನತಾ ಪಕ್ಷ ಒಗ್ಗೂಡುವುದು ಮುಖ್ಯವಾಗಿತ್ತು ಎಂದು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಹೇಳಿದ್ದಾರೆ.

"ನಾನು ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ರಾಜ್ಯದ ಸುಧಾರಣೆಗಾಗಿ ಸ್ಥಿರವಾದ ಸರ್ಕಾರವನ್ನು ಹೊಂದಿರುವುದು ಮುಖ್ಯ ಎಂದು ನಮ್ಮ ಪಕ್ಷ ನಿರ್ಧರಿಸಿದೆ." ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com