ಸಂಸತ್ತು ಮೇಲೆ ದಾಳಿ ಪ್ರಕರಣದಲ್ಲಿ ಬಂಧಿತನಾಗಿದ್ದ ದೆಹಲಿ ವಿ.ವಿ ಮಾಜಿ ಪ್ರೊಫೆಸರ್ ಗಿಲಾನಿ ನಿಧನ 

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ಸಂಸತ್ತು ಮೇಲೆ ದಾಳಿ ಕೇಸಿನಲ್ಲಿ ಬಂಧಿತನಾಗಿದ್ದ  ಸೈಯದ್ ಅಬ್ದುಲ್ ರೆಹ್ಮಾನ್ (ಎಸ್ಎಆರ್) ಗಿಲಾನಿ ಹೃದಯಾಘಾತಕ್ಕೀಡಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ. 
ಸೈಯದ್ ಅಬ್ದುಲ್ ರೆಹ್ಮಾನ್ (ಎಸ್ಎಆರ್) ಗಿಲಾನಿ(ಸಂಗ್ರಹ ಚಿತ್ರ)
ಸೈಯದ್ ಅಬ್ದುಲ್ ರೆಹ್ಮಾನ್ (ಎಸ್ಎಆರ್) ಗಿಲಾನಿ(ಸಂಗ್ರಹ ಚಿತ್ರ)

 ನವದೆಹಲಿ; ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ಸಂಸತ್ತು ಮೇಲೆ ದಾಳಿ ಕೇಸಿನಲ್ಲಿ ಬಂಧಿತನಾಗಿದ್ದ  ಸೈಯದ್ ಅಬ್ದುಲ್ ರೆಹ್ಮಾನ್ (ಎಸ್ಎಆರ್) ಗಿಲಾನಿ ಹೃದಯಾಘಾತಕ್ಕೀಡಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ.
ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಗಿಲಾನಿ ನಿಧನ ಹೊಂದಿದ್ದಾನೆ. ಉಸಿರಾಟ ಮತ್ತು ಇತರ ಸಮಸ್ಯೆಗಳಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದ.


2001ರಲ್ಲಿ ಸಂಸತ್ತು ಮೇಲಿನ ದಾಳಿ ಕೇಸಿಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಗಿಲಾನಿಯನ್ನು ಬಂಧಿಸಿದ್ದರು. ನಂತರ ಸರಿಯಾದ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ 2003ರಲ್ಲಿ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತ್ತು. 2005ರಲ್ಲಿ ಸುಪ್ರೀಂ ಕೋರ್ಟ್ ಕೂಡ ಸೂಕ್ತ ಸಾಕ್ಷಿಗಳ ಕೊರತೆಯಿದೆ ಎಂದು ಹೇಳಿತು ಆದರೆ ದಾಳಿಯ ಬಗ್ಗೆ ಸಣ್ಣ ಸಂಶಯವನ್ನು ಗಿಲಾನಿ ಮೇಲೆ ಇಟ್ಟುಕೊಂಡಿತ್ತು.


ಗಿಲಾನಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಜಾಕಿರ್ ಹುಸೇನ್ ಕಾಲೇಜಿನಲ್ಲಿ ಅರೆಬಿಕ್ ಭಾಷೆಯ ಪ್ರಾಧ್ಯಾಪಕನಾಗಿದ್ದ ಗಿಲಾನಿ. 2016ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಲಾನಿ ವಿರುದ್ಧ ದೇಶ ವಿರೋಧಿ ಕೇಸು ದಾಖಲಾಗಿ ಬಂಧಿತನಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com