ಹೈದರಾಬಾದ್: 'ಲಿಂಕ್ಡ್ಇನ್' ಮೂಲಕ ಸ್ನೇಹವಾಗಿ ಮೋಸ ಹೋಗಿ 1 ಕೋಟಿ ರೂ.ಕಳೆದುಕೊಂಡ ಮಹಿಳೆ!

ಲಿಂಕ್ಡ್‌ಇನ್ ಸೋಷಿಯಲ್ ಮೀಡಿಯಾದಲ್ಲಿ ಆದ ಸ್ನೇಹದಿಂದ ಹೈದರಾಬಾದಿನಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಕಳೆದುಕೊಂಡ ಪ್ರಕರಣ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಲಿಂಕ್ಡ್‌ಇನ್ ಸೋಷಿಯಲ್ ಮೀಡಿಯಾದಲ್ಲಿ ಆದ ಸ್ನೇಹದಿಂದ ಹೈದರಾಬಾದಿನಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಕಳೆದುಕೊಂಡ ಪ್ರಕರಣ ನಡೆದಿದೆ.


ಲಿಂಕ್ಡ್ ಇನ್ ಮೂಲಕ ಮಹಿಳೆ ಅನಾಮಧೇಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಒಂದು ದಿನ ಆಕೆಗೆ ಐಫೋನ್, ರೊಲೆಕ್ಸ್ ವಾಚ್, ದುಬಾರಿ ಪರ್ಫ್ಯೂಮ್ ಗಳು ಮತ್ತು ಕೆಲ ಬ್ರಿಟನ್ ಕರೆನ್ಸಿ ಗಳನ್ನು ಗಿಫ್ಟ್ ಆಗಿ ಪಾರ್ಸೆಲ್ ಕಳುಹಿಸುತ್ತೇನೆ.  ಅದಕ್ಕೆ ಮೊದಲು ಹಣ ಬೇಕು ಎಂದು ಏನೇನೋ ಸುಳ್ಳು ಹೇಳಿ ಆಕೆಯಿಂದ ಹಣ ವಸೂಲಿ ಮಾಡಿಕೊಂಡನು. ಎಷ್ಟು ದಿನಗಳಾದರೂ ಪಾರ್ಸೆಲ್ ಬರದಿದ್ದಾಗ ಆಕೆಗೆ ತಾನು ಮೋಸ ಹೋಗಿದ್ದೇನೆಂದು ಅರಿವಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು.


ನಡೆದ ಘಟನೆ: 31 ವರ್ಷದ ಮಹಿಳೆಗೆ ಕಳೆದ ಮೇ ತಿಂಗಳಲ್ಲಿ ಲಿಂಕ್ಡ್ ಇನ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಮಹಿಳೆ ಸ್ವೀಕರಿಸಿದರು. ತಾನು ಪೈಲಟ್ ಆಗಿದ್ದು ಬ್ರಿಟಿಷ್ ಏರ್ ವೇಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಕೆಲ ದಿನಗಳವರೆಗೆ ಚಾಟಿಂಗ್ ನಡೆಸಿ ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡರು. ವಾಟ್ಸಾಪ್ ನಲ್ಲಿ ಚಾಟಿಂಗ್ ಮಾಡುವುದು ಹೆಚ್ಚಾಯಿತು. 


ಆಕೆಯ ಜೊತೆ ಸ್ನೇಹ ಹೆಚ್ಚಾಗುತ್ತಿದ್ದಂತೆ ಒಂದು ದಿನ ಆತ ನಾನು ನಿನಗೊಂದು ಪಾರ್ಸೆಲ್ ಕಳುಹಿಸುತ್ತೇನೆ ಅದಕ್ಕೆ ಶುಲ್ಕವಾಗುತ್ತದೆ ಎಂದನು. ಆತನ ಮಾತನ್ನು ನಂಬಿ ಮಹಿಳೆ 7 ಲಕ್ಷ ರೂಪಾಯಿ ಕಟ್ಟಿದ್ದರು. ನಂತರ ಮತ್ತೆ ವಾಟ್ಸಾಪ್ ನಲ್ಲಿ ಆತ, ನನ್ನ ತಂದೆಗೆ ಕ್ಯಾನ್ಸರ್ ಇದೆ ಆಸ್ಪತ್ರೆಯಲ್ಲಿದ್ದಾರೆ, ತುರ್ತಾಗಿ ಹಣ ಬೇಕೆಂದನು. ಆತನ ಮಾತನ್ನು ನಂಬಿ ಮಹಿಳೆ ಆತ ಹೇಳಿದ ವಿವಿಧ 11 ಖಾತೆಗಳಿಗೆ ಒಟ್ಟು 94 ಲಕ್ಷ ರೂಪಾಯಿ ವರ್ಗಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com