ಮಸೀದಿಗಳಿಗೆ  ಮುಸ್ಲಿಂ ಮಹಿಳೆಯರ ಪ್ರವೇಶ: ಕೇಂದ್ರಕ್ಕೆ ಸುಪ್ರೀಂ ನೋಟೀಸ್

ದೇಶದಲ್ಲಿನ  ಎಲ್ಲ ಮಸೀದಿಗಳಿಗೆ  ಮುಸ್ಲಿಂ ಮಹಿಳೆಯರ  ಪ್ರವೇಶಕ್ಕೆ ಅನುಮತಿ ಕೋರಿ  ಸಲ್ಲಿಸಿದ್ದ ಸಾರ್ವಜನಿಕ  ಹಿತಾಸಕ್ತಿ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಎತ್ತಿಕೊಂಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ದೇಶದಲ್ಲಿನ  ಎಲ್ಲ ಮಸೀದಿಗಳಿಗೆ  ಮುಸ್ಲಿಂ ಮಹಿಳೆಯರ  ಪ್ರವೇಶಕ್ಕೆ ಅನುಮತಿ ಕೋರಿ  ಸಲ್ಲಿಸಿದ್ದ ಸಾರ್ವಜನಿಕ  ಹಿತಾಸಕ್ತಿ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಎತ್ತಿಕೊಂಡಿದೆ.

ಈ ದಾವೆಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ನವೆಂಬರ್ 5ರೊಳಗೆ ತನ್ನ  ಪ್ರತಿಕ್ರಿಯೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ  ನೋಟೀಸ್ ನೀಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಎಸ್.ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ . 

ಯಾಸ್ಮಿನ್ ಝುಬೇರ್ ಅಹಮ್ಮದ್ ಪೀರ್ಝಾದೆ ಎಂಬ ಮಹಿಳೆ ರಿಟ್ ಹಾಕಿದ್ದು , ಸರ್ಕಾರಕ್ಕೆ ಮತ್ತು ಅದರ ಎಲ್ಲ ಆಡಳಿತ ವಿಭಾಗ, ಮತ್ತು  ವಕ್ಫ್ ಹಾಗೂ  ಮುಸ್ಲಿಂ ಕಲ್ಯಾಣ ಮಂಡಳಿಗಳಿಗೂ ಇದರ ಬಗ್ಗೆ  ನಿರ್ದೇಶನ ನೀಡಬೇಕು ಎಂದು  ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com