ಬಿಜೆಪಿ ಜತೆ ತಾವು ಇರುವ ಮತ್ತು ಇಲ್ಲದಿರುವುದರ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಪ್ರಧಾನಿ ಮೋದಿ

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಗೆಲುವಿನ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲ ಕಾಲ ಕಲ್ಪನೆಯ ಲೋಕಕ್ಕೆ ಜಾರಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಗೆಲುವಿನ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲ ಕಾಲ ಕಲ್ಪನೆಯ ಲೋಕಕ್ಕೆ ಜಾರಿದರು.

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 2014ಕ್ಕೂ ಮುನ್ನ ಹಾಗೂ ತಾವು 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬಂದ ನಂತರ ಬಿಜೆಪಿಯಲ್ಲಾದ ಬದಲಾವಣೆಗಳ ಬಗ್ಗೆ ವಿವರಿಸಿದರು.

ಈ ಹಿಂದೆ ನಾವು ಹರಿಯಾಣದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದೇವು. 2014ಕ್ಕೂ ಮುನ್ನ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಕೆಲವೇ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದ್ದವು. ಆಗ 10 ಸ್ಥಾನಗಳಲ್ಲಿ ಗೆದ್ದರೆ ಅದೇ ನಮಗೆ ದೊಡ್ಡ ಗೆಲುವು. ಆದರೆ ಬಿಜೆಪಿಯಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ಹೇಳಿಕೆ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುನ್ನ ಮತ್ತು ನಂತರದ ಬಿಜೆಪಿಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ. 

ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಜನರು ಬಿಜೆಪಿ ಮೇಲೆ ನಂಬಿಕೆಯಿಟ್ಟಿರುವುದನ್ನು ತೋರಿಸುತ್ತದೆ. ದೀಪಾವಳಿಗೂ ಮುನ್ನ ಈ ಉಡುಗೊರೆ ನೀಡಿದ ಉಭಯ ರಾಜ್ಯದ ಮತದಾರರಿಗೆ ನಾನು ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್​ ಮತ್ತು ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ಇಬ್ಬರು ಕೂಡ ಮೊದಲ ಬಾರಿಗೆ ಮುಖ್ಯಮಂತ್ರಿಯಾದವರು. ಇವರಿಬ್ಬರಿಗೂ ಸಚಿವರಾಗಿಯೂ ಅನುಭವ ಇರಲಿಲ್ಲ. ಆದರೂ ಕಳೆದ ಐದು ವರ್ಷ ಜನರ ಕಲ್ಯಾಣಕ್ಕೆ ಅವರಿಬ್ಬರು ದುಡಿದರು. ಇದೇ ಕಾರಣದಿಂದಾಗಿ ಇಂದು ಜನರು ಮತ್ತೊಮ್ಮೆ ನಮ್ಮ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ್ದಾರೆ ಎಂದರು.

ಇಂದಿನ ಚುನಾವಣಾ ಫಲಿತಾಂಶವನ್ನು ರಾಜಕೀಯ ಪಂಡಿತರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ, ಹರಿಯಾಣದ ಗೆಲುವು ಅಸಾಧರಣ ಗೆಲುವಾಗಿದೆ. ಐದು ವರ್ಷ ಆಡಳಿತದ ಬಳಿಕ ಆಡಳಿತ ವಿರೋಧಿ ಅಲೆಯಿಂದ ಸೋತಂತಹ ಸಾಕಷ್ಟು ನಿದರ್ಶನಗಳಿವೆ. ಇದರ ಹೊರತಾಗಿಯೂ ಗೆಲುವು ಸಾಧಿಸಿರುವುದು ಅಸಾಧಾರಣ ಎಂದು ಪ್ರಧಾನಿ ಬಣ್ಣಿಸಿದರು.

ಪ್ರಧಾನಿ ಮೋದಿಗೂ ಮುನ್ನ ಮಾತನಾಡಿದ ಗೃಹ ಸಚಿವ ಅಮಿತ್​ ಶಾ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಲಿದೆ. ಹರಿಯಾಣದಲ್ಲೂ ಕೂಡ ಕಳೆದ ಬಾರಿಗೆ ಹೋಲಿಸಿದರೆ ಶೇ.3 ರಷ್ಟು ಮತ ಹಂಚಿಕೆ ಹೆಚ್ಚಾಗಿದೆ. ಇದಕ್ಕಾಗಿ ನಾವು ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com