ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಡಿ ನುಸುಳುತ್ತಿದ್ದ ಪಾಕ್ ನುಸುಳುಕೋರನನ್ನು ಹೊಡೆದುರುಳಿಸಿದ ಸೇನೆ

ಪಂಜಾಬ್'ನ ಭರೋವಾಲ್ ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ನುಸುಳುಕೋರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

ಹೋಶಿಯಾರ್ಪುರ: ಪಂಜಾಬ್ ರಾಜ್ಯದ ಅಮೃತಸರ ಸೆಕ್ಟರ್‌ನ ಭರೋಪಾಲ್ ಬಳಿ ಗಡಿ ಭದ್ರತಾ ಪಡೆ ಬಿಎಸ್‌ಎಫ್ ಪಾಕಿಸ್ತಾನದ ನುಸುಳುಕೋರನನ್ನು ಬಲಿತೆಗೆದುಕೊಂಡಿದೆ.

ಭರೋಪಾಲ್ ನಲ್ಲಿ ನಿಯೋಜಿಸಲಾಗಿರುವ ಬಿಎಸ್‌ಎಫ್ ಪಡೆಗಳು ಗುರುವಾರ ಮಧ್ಯಾಹ್ನ ಗಡಿ ನುಸುಳಲು ಯತ್ನಿಸುತ್ತಿದ್ದ ವಕ್ತಿಯ ಮೇಲೆ ಕಣ್ಗಾವಲಿರಿಸಿದ್ದವು. ಆತ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತೀಯ ಪ್ರದೇಶದೊಳಗೆ ಪ್ರವೇಶಿಸುತ್ತಿದ್ದಂತೆ ಒಳನುಗ್ಗದಂತೆ ಎಚ್ಚರಿಸಲಾಯಿತು.

ಆದರೆ ಸೈನಿಕ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಳ್ಳದ ಆತ ಅನುಮಾನಾಸ್ಪದ ರೀತಿಯಲ್ಲಿ ಗಡಿಯ ಬೇಲಿಯತ್ತ ಸಾಗಿಬರುತ್ತಿದ್ದ ಎಂದು ಬಿಎಸ್‌ಎಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ವೇಳೆ ಶಂಕಿತ ವ್ಯಕ್ತಿಯಿಂದ ಯಾವುದೇ ದುಷ್ಕೃತ್ಯ ನಡೆಯದಂತೆ ತಡೆಯಲು ಹಾಗೂ ಆತ್ಮರಕ್ಷಣೆಗಾಗಿ ಬಿಎಸ್‌ಎಫ್ ಪಡೆ ಗುಂಡು ಹಾರಿಸಿದೆ. ಶಂಕಿತ ನುಸುಳುಕೋರ ಸುಮಾರು ೪೫ ವರ್ಷ ವಯಸ್ಸಿನವರು ಎಂದು ಹೇಳಲಾಗಿದ್ದು, ಗುಂಡೇಟಿಗೆ ಬಲಿಯಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com