ಸೋನಿಯಾ ಗಾಂಧಿ ನಿವಾಸದಲ್ಲಿ ಇಂದು ಕಾಂಗ್ರೆಸ್ ನಾಯಕರ ಸಭೆ: ಬಿಜೆಪಿಗೆ ಪ್ರತಿತಂತ್ರ ರೂಪಿಸಲು ಚರ್ಚೆ 

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ದೆಹಲಿಯಲ್ಲಿ ಸಭೆ ಸೇರಿರುವ ಕಾಂಗ್ರೆಸ್ ನ ಉನ್ನತ ಮಟ್ಟದ ನಾಯಕರು ಚರ್ಚೆ ನಡೆಸಿದ್ದಾರೆ. 
ಸೋನಿಯಾ ಗಾಂಧಿ-ಡಾ ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)
ಸೋನಿಯಾ ಗಾಂಧಿ-ಡಾ ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)

ನವದೆಹಲಿ;ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ದೆಹಲಿಯಲ್ಲಿ ಸಭೆ ಸೇರಿರುವ ಕಾಂಗ್ರೆಸ್ ನ ಉನ್ನತ ಮಟ್ಟದ ನಾಯಕರು ಚರ್ಚೆ ನಡೆಸಿದ್ದಾರೆ. ಚುನಾವಣೆ ಫಲಿತಾಂಶ ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿ ಎದುರು ಸ್ಪರ್ಧಿಸಲು ಯಾವೆಲ್ಲಾ ರಾಜಕೀಯ ತಂತ್ರಗಳನ್ನು ನಡೆಸಬೇಕು ಎಂದು ಚರ್ಚೆ ನಡೆಸಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ 17 ಸದಸ್ಯರನ್ನು ಹೊಂದಿರುವ ನಾಯಕರ ತಂಡದಲ್ಲಿ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಉನ್ನತ ನಾಯಕರಿದ್ದಾರೆ.


ಇಂದು ಬೆಳಗ್ಗೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಲಿಲ್ಲ.
ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕ ದಾಖಲಾತಿ (ಎನ್ಆರ್ ಸಿ) ಹೇಗೆ ಪ್ರಮುಖ ವಿಷಯವಾಯಿತು, ಇನ್ನು ಮುಂದಿನ ತಿಂಗಳು ನವೆಂಬರ್ 18ರಿಂದ ನಡೆಯುತ್ತಿರುವ ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕು, ದೇಶದ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ವಲಯ ಸಂಸ್ಥೆಗಳ ಮಾರಾಟ ಮೊದಲಾದ ವಿಷಯಗಳಲ್ಲಿ ಸರ್ಕಾರದ ವೈಫಲ್ಯವನ್ನು ಹೇಗೆ ತೆರೆದಿಡಬೇಕು ಎಂಬ ಕುರಿತು ಕೂಡ ಚರ್ಚೆ ನಡೆಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com