ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಜಾಮೀನು ಅರ್ಜಿ ವಿರುದ್ಧ ಸಿಬಿಐ ಪರಾಮರ್ಶೆ ಅರ್ಜಿ 

ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಕೇಸಿನಲ್ಲಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ಜಾಮೀನು ನೀಡುವ ಕುರಿತು ತಾನು ನೀಡಿರುವ ಆದೇಶವನ್ನು ಪರಾಮರ್ಶೆ ನಡೆಸುವಂತೆ ಸಿಬಿಐ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದೆ.
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಕೇಸಿನಲ್ಲಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ಜಾಮೀನು ನೀಡುವ ಕುರಿತು ತಾನು ನೀಡಿರುವ ಆದೇಶವನ್ನು ಪರಾಮರ್ಶೆ ನಡೆಸುವಂತೆ ಸಿಬಿಐ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದೆ.


ಸಿಬಿಐ ನಿನ್ನೆ ಸಲ್ಲಿಸಿರುವ ಪರಾಮರ್ಶೆ ಅರ್ಜಿಯಲ್ಲಿ, ತಾನು ಕಳೆದ 22ರಂದು ಪಿ ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿ ನೀಡಿದ್ದ ಆದೇಶವನ್ನು ಪರಾಮರ್ಶೆ ನಡೆಸುವಂತೆ ಕೋರಿದೆ.


ಉನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಲ್ಲಿಸಿದ ತನಿಖೆಯು ದಾಖಲೆಗೆ ಸ್ಪಷ್ಟವಾಗಿ ವಿರುದ್ಧವಾಗಿದೆ ಮತ್ತು ದಾಖಲೆಯ ಮೇಲೆ ದೋಷ ಕಂಡುಬಂದಿದೆ ಎಂದು ಸಿಬಿಐ ನಿನ್ನೆ ಸಲ್ಲಿಸಿದ ಪರಾಮರ್ಶೆ ಅರ್ಜಿಯಲ್ಲಿ ಹೇಳಿದೆ.


ಪಿ ಚಿದಂಬರಂ ಅವರು ಸಲ್ಲಿಸಿದ್ದ ಮನವಿಗೆ ಅಕ್ಟೋಬರ್ 18ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈ ಬಾರಿ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದು, ಐಎನ್ ಎಕ್ಸ್ ಮೀಡಿಯಾ ಕೇಸಿನಲ್ಲಿ ಪ್ರಮುಖ ಸಾಕ್ಷಿಗಳ ಮೇಲೆ ಒತ್ತಡ ಹೇರಿ ಪ್ರಭಾವ ಬೀರುವ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com