ಹಿಂದು ಸಮಾಜ ಪಕ್ಷದ ನೂತನ ಅಧ್ಯಕ್ಷೆಯಾಗಿ ತಿವಾರಿ ಪತ್ನಿ ಆಯ್ಕೆ

ಹಿಂದು ಸಮಾಜ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹತ್ಯೆಯಾದ ಕಮಲೇಶ್ ತಿವಾರಿಯವರ ಪತ್ನಿ ಕಿರಣ್ ತಿವಾರಿಯವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. 

Published: 26th October 2019 12:13 PM  |   Last Updated: 26th October 2019 12:13 PM   |  A+A-


c

ಕಿರಣ್ ತಿವಾರಿ

Posted By : Manjula VN
Source : ANI

ಲಖನೌ: ಹಿಂದು ಸಮಾಜ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹತ್ಯೆಯಾದ ಕಮಲೇಶ್ ತಿವಾರಿಯವರ ಪತ್ನಿ ಕಿರಣ್ ತಿವಾರಿಯವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. 

ಅ.18ರಂದು ಕಮಲೇಶ್ ತಿವಾರಿಯವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ತಿವಾರಿಯವರನ್ನು ಆಸ್ಪತ್ರೆಗೆ ದಾಖಲಿಸಿದೆಯಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಘಟನೆ ಲಖನೌನ್ನು ಬೆಚ್ಚಿಬೀಳಿಸಿದೆ. 

ಹಿಂದು ಸಮಾಜ ಪಕ್ಷದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಿರಣ್ ತಿವಾರಿಯವರು ಶೀಘ್ರದಲ್ಲಿಯೇ ಸುದ್ದಿಗೋಷ್ಟಿ ನಡೆಸಿ ಮಾತನಾಡಲಿದ್ದಾರೆಂದು ಮೂಲಗಳು ತಿಳಿಸಿವೆ. ಸುದ್ದಿಗೋಷ್ಟಿಯಲ್ಲಿ ಪತಿಯ ಹತ್ಯೆ ಪ್ರಕರಣ ಕುರಿತಂತೆ ಕಿರಣ್ ಅವರು ಏನು ಮಾತನಾಡುತ್ತಾರೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. 

ಇನ್ನು ಕಮಲೇಶ್ ತಿವಾರಿಯವರ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಈ ವರೆಗೂ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp