ಅಧಿಕಾರ ಹಂಚಿಕೆಗಾಗಿ 50:50 ಸೂತ್ರ: ಬಿಜೆಪಿಯಿಂದ ಲಿಖಿತ ಭರವಸೆಗೆ ಶಿವಸೇನೆ ಪಟ್ಟು! 

ಶಿವಸೇನೆ ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಪಟ್ಟನ್ನು ಮುಂದುವರೆಸಿದೆ. ಸತತ ಒಂದು ಗಂಟೆಗಳ ಸಭೆಯ ನಂತರ ಶಿವಸೇನೆ ಶಾಸಕರು ತಮ್ಮ ಪಕ್ಷಕ್ಕೆ ಸಿಎಂ ಸ್ಥಾನ ಸಿಗಬೇಕೆಂದು ಒತ್ತಾಯಿಸಿದ್ದು ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಯ ಸಂಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆಗೆ ವಹಿಸಿದ್ದಾರೆ. 
50:50 ಸೂತ್ರ ಜಾರಿ ಬಗ್ಗೆ ಲಿಖಿತ ಭರವಸೆ ಕೊಡಿ: ಬಿಜೆಪಿಗೆ ಶಿವಸೇನೆ!
50:50 ಸೂತ್ರ ಜಾರಿ ಬಗ್ಗೆ ಲಿಖಿತ ಭರವಸೆ ಕೊಡಿ: ಬಿಜೆಪಿಗೆ ಶಿವಸೇನೆ!

ಮುಂಬೈ: ಶಿವಸೇನೆ ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಪಟ್ಟನ್ನು ಮುಂದುವರೆಸಿದೆ. ಸತತ ಒಂದು ಗಂಟೆಗಳ ಸಭೆಯ ನಂತರ ಶಿವಸೇನೆ ಶಾಸಕರು ತಮ್ಮ ಪಕ್ಷಕ್ಕೆ ಸಿಎಂ ಸ್ಥಾನ ಸಿಗಬೇಕೆಂದು ಒತ್ತಾಯಿಸಿದ್ದು ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಯ ಸಂಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆಗೆ ವಹಿಸಿದ್ದಾರೆ. 

ಅಧಿಕಾರ ಸಮನಾಗಿ ಹಂಚಿಕೆಯಾಗಬೇಕು, 50:50 ಸೂತ್ರದ ಅಡಿಯಲ್ಲಿ ಸಿಎಂ ಸ್ಥಾನವನ್ನು ಎರಡುವರೆ ವರ್ಷ ಶಿವಸೇನೆಗೆ ಬಿಟ್ಟುಕೊಡಬೇಕೆಂಬುದು ಶಿವಸೇನೆಯ ಬೇಡಿಕೆಯಾಗಿದ್ದು, ಈ ಸೂತ್ರವನ್ನು ಜಾರಿಗೊಳಿಸುವ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆ ಪಡೆದುಕೊಳ್ಳಬೇಕೆಂದು ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ದೇವೇಂದ್ರ ಫಡ್ನವೀಸ್ ಅವರೊಂದಿಗೆ 50:50 ಸೂತ್ರದ ಬಗ್ಗೆ ಈ ಹಿಂದೆ ಚರ್ಚಿಸಲಾಗಿತ್ತು. 2.5 ವರ್ಷ ಸಿಎಂ ಸ್ಥಾನ ನಮಗೆ ಬಿಟ್ಟುಕೊಡಬೇಕೆಂಬುದು ನಮ್ಮ ಯೋಜನೆಯ ಭಾಗವಾಗಿತ್ತು. ಅಧಿಕಾರದ ಸಮ ಹಂಚಿಕೆ ಹಾಗೂ ಸಿಎಂ ಸ್ಥಾನ ಎರಡೂ ನಮಗೆ ಮುಖ್ಯವಾಗಿದೆ. ಉಪಮುಖ್ಯಮಂತ್ರಿಯ ಸ್ಥಾನ ನಂತರದ ವಿಷಯ, ಬಿಜೆಪಿ 50:50 ಸೂತ್ರದ ಬಗ್ಗೆ ಲಿಖಿತ ಭರವಸೆ ನೀಡಿದರೆ ನಾವು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಶಿವಸೇನೆ ನಾಯಕ ಪ್ರತಾಪ್ ಸರ್ನಾಯ್ಕ್ ಹೇಳಿದ್ದಾರೆ. 

ಸರ್ಕಾರ ರಚನೆಗಾಗಿ ಮಾತುಕತೆ ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಉದ್ಧವ್ ಠಾಕ್ರೆಗೆ ನೀಡಲಾಗಿದೆ, ಠಾಕ್ರೆ ಯಾವುದನ್ನು ನಿರ್ಧರಿಸುತ್ತಾರೆಯೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಪ್ರತಾಪ್ ಸರ್ನಾಯ್ಕ್ ಹೇಳಿದ್ದಾರೆ. 

ಶಿವಸೇನೆಯಿಂದ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಹೊಸದಾಗಿ ಮುಂದಿನ ಸರ್ಕಾರದಲ್ಲಿ ಆದಿತ್ಯ ಠಾಕ್ರೆ ಸಿಎಂ ಆಗಬೇಕೆಂಬುದು ಆಯ್ಕೆಯಾಗಿರುವ ಶಿವಸೇನೆ ಶಾಸಕರ ಬೇಡಿಕೆಯಾಗಿದೆ. ಒಂದು ವೇಳೆ ಬಿಜೆಪಿ ನಮ್ಮ ಬೇಡಿಕೆಗಳಿಗೆ ಒಪ್ಪದೇ ಇದ್ದಲ್ಲಿ ಬೇರೆ ಆಯ್ಕೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಸರ್ನಾಯ್ಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com