ಹರ್ಯಾಣ: ಮುಖ್ಯಮಂತ್ರಿ ಆಗಿ 2 ನೇ ಅವಧಿಗೆ ಮನೋಹರ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕಾರ

ಹರ್ಯಾಣದ ಮುಖ್ಯಮಂತ್ರಿ ಆಗಿ 2ನೇ ಅವಧಿಗೆ ಮನೋಹರ ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ಜನ ನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲ ಇಂದು  ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮನೋಹರ್ ಲಾಲ್ ಖಟ್ಟರ್
ಮನೋಹರ್ ಲಾಲ್ ಖಟ್ಟರ್

ಚಂಢೀಗಡ: ಹರ್ಯಾಣದ ಮುಖ್ಯಮಂತ್ರಿ ಆಗಿ 2ನೇ ಅವಧಿಗೆ ಮನೋಹರ ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ಜನ ನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲ   ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ

ರಾಜಭವನದಲ್ಲಿ  ಇಂದು ನಡೆದ ಸರಳ  ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮನೋಹರ ಲಾಲ್ ಖಟ್ಟರ್ ಹಾಗೂ ದುಷ್ಯಂತ್ ಚೌಟಾಲ ಅವರಿಗೆ ಹರ್ಯಾಣ ಗವರ್ನರ್ ಸತ್ಯದೇವ್ ನಾರಾಯಣ ಆರ್ಯ ಪ್ರಮಾಣ ವಚನ ಬೋಧಿಸಿದರು. 

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಶಿರೋಮಣಿ ಅಕಾಲಿ ದಳ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಮತ್ತಿತರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಮೂಲಕ ಹರ್ಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು.

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚನೆಗೆ ಆರು ಸ್ಥಾನಗಳ ಕೊರತೆ ಇತ್ತು. ಇದರಿಂದಾಗಿ ಆರು ಪಕ್ಷೇತರರು ಸೇರಿದಂತೆ ಜೆಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com