ಮಹಾ ಕಗ್ಗಂಟು: ಫಡ್ನವೀಸ್, ಶಿವಸೇನಾ ಮುಖಂಡರಿಂದ ಪ್ರತ್ಯೇಕವಾಗಿ ರಾಜ್ಯಪಾಲರ ಭೇಟಿ!

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದು ಒಂದು ವಾರ ಕಳೆಯುತ್ತಿದ್ದರೂ ಬಿಜೆಪಿ ಹಾಗೂ ಶಿವಸೇನಾ ನಡುವಣ ಹಗ್ಗಜಗ್ಗಾಟದಿಂದಾಗಿ  ಸರ್ಕಾರ ರಚನೆ ಮಹಾ ಕಗ್ಗಂಟಾಗಿ ಪರಿಣಮಿಸಿದೆ. 
ರಾಜ್ಯಪಾಲರೊಂದಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ರಾಜ್ಯಪಾಲರೊಂದಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದು ಒಂದು ವಾರ ಕಳೆಯುತ್ತಿದ್ದರೂ ಬಿಜೆಪಿ ಹಾಗೂ ಶಿವಸೇನಾ ನಡುವಣ ಹಗ್ಗಜಗ್ಗಾಟದಿಂದಾಗಿ  ಸರ್ಕಾರ ರಚನೆ ಮಹಾ ಕಗ್ಗಂಟಾಗಿ ಪರಿಣಮಿಸಿದೆ. 

ಈ ಮಧ್ಯೆ   ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನಾ ಮುಖಂಡರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜಭವನದಲ್ಲಿಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಇಂದು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಶಿವಸೇನಾ ಮುಖಂಡ ದಿವಾಕರ್  ರಾಟೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.  

ಇದೊಂದು ಸೌಜನ್ಯಯುಕ್ತ ಭೇಟಿಯಾಗಿದೆ, ದೀಪಾವಳಿ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ದಿವಾಕರ್ ರಾಟೆ ರಾಜ್ಯಪಾಲರನ್ನು ಭೇಟಿ ಮಾಡಿರುವುದಾಗಿ ರಾಜಭವನ ಸ್ಪಷ್ಟಪಡಿಸಿದೆ. 

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿವಾಕರ್ ರಾಟೆ, ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆಯಲಿಲ್ಲ ಎಂದು ತಿಳಿಸಿದರು.  

ಸರ್ಕಾರ ರಚನೆ ಸಂಬಂಧ ದೀಪಾವಳಿ ಸಂದರ್ಭದಲ್ಲಿ ದಿವಾಕರ್ ರಾಟೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ  ಪ್ರತಿಕ್ರಿಯಿಸಿದ  ದಿವಾಕರ್ ರಾಟೆ, ಹಲವು ದಿನಗಳ ಬಳಿಕ ರಾಜಭವನಕ್ಕೆ ಭೇಟಿ ನೀಡಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ದೀಪಾವಳಿ ಪ್ರಯುಕ್ತ ಶುಭ ಕೋರಿದ್ದೇನೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು. 

ಸರ್ಕಾರ ರಚನೆ ಸಂಬಂಧ ಬಿಜೆಪಿ ಹಾಗೂ ಶಿವಸೇನಾ ನಡುವಣ ಬಿಕ್ಕಟ್ಟು ಮುಂದುವರೆದಿರುವ ಬೆನ್ನಲ್ಲೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಹಾಗೂ ಶಿವಸೇನಾ 56 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಆದರೆ, ಶಿವಸೇನಾ ಸಮಾನ ಅಧಿಕಾರ ಬೇಡಿಕೆ ಮುಂದಿಟ್ಟಿರುವುದರಿಂದ ಸರ್ಕಾರ ರಚನೆ ವಿಳಂಬವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com