ಮಸ್ಲಿಮ್ ಮಕ್ಕಳನ್ನು 'ಮಾಲಿನ್ಯ'ಕ್ಕೆ ಹೋಲಿಸಿದ ಮಾಜಿ ಎಎಪಿ ಶಾಸಕ!

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್ ಒಂದು ವಿವಾದದ ಬಿರುಗಳಿ ಎಬ್ಬಿಸಿದೆ. ಮಿಶ್ರಾ ಅವರ ಟ್ವೀಟ್ ಒಂದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ರಾಹ್ಟ್ರೀಯ ಜನತಾ ದಳ (ಆರ್ಜೆಡಿ) ಆರೋಪ ಮಾಡಿದೆ.
ಕಪಿಲ್ ಮಿಶ್ರಾ
ಕಪಿಲ್ ಮಿಶ್ರಾ

ನವದೆಹಲಿ: ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್ ಒಂದು ವಿವಾದದ ಬಿರುಗಳಿ ಎಬ್ಬಿಸಿದೆ. ಮಿಶ್ರಾ ಅವರ ಟ್ವೀಟ್ ಒಂದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ರಾಹ್ಟ್ರೀಯ ಜನತಾ ದಳ (ಆರ್ಜೆಡಿ) ಆರೋಪ ಮಾಡಿದೆ.

ಕಪಿಲ್ ಮಿಶ್ರಾ ಮಾತ್ರ ತಾವು ಜನಸಂಖ್ಯೆ ನಿಯಂತ್ರಣದ ಕುರಿತ ಜಾಗೃತಿಗಾಗಿ ಈ ಟ್ವೀಟ್ ಮಾಡಿದ್ದಾಗಿ ಸಮರ್ಥಿಸಿಕೊಂಡರು. 

"ಮಾಲಿನ್ಯವು ಕಡಿಮೆಯಾಗಬೇಕೆಂದು ನೀವು ಬಯಸಿದರೆ, ನೀವು ಈ ಪಟಾಕಿಗಳನ್ನು ಕಡಿಮೆ ಮಾಡಬೇಕು ಮತ್ತು ದೀಪಾವಳಿಯಂದು ಸಿಡಿವ ಪಟಾಕಿಗಳನ್ನಲ್ಲ" ಎಂದು ಮಿಶ್ರಾ ಟ್ವೀಟ್ ಮಾಡಿದ್ದು ಜತೆಗೆ ಮುಸ್ಲಿಂ ಟೋಪಿ ಧರಿಸಿದ ವೃದ್ದ, ಹಲವಾರು ಮಕ್ಕಳೊಡನೆ ಸಾಲಲ್ಲಿ ನಿಂದ ಬುರ್ಖಾಧಾರಿ ಮುಸ್ಲಿಂ ಮಹಿಳೆಯ ಚಿತ್ರವನ್ನು ಅವರು ಟ್ಯಾಗ್ ಮಾಡಿದ್ದಾರೆ.

ಆರ್ಜೆಡಿ ಮಿಶ್ರಾ ಅವರ ಈ ಟ್ವೀಟ್ ಬಗೆಗೆ ಖಾರವಾಗಿ ಪ್ರತಿಕ್ರಯಿಸಿದ್ದು ಮಿಶ್ರಾ "ಮುಸ್ಲಿಂ ಮಕ್ಕಳನ್ನು" ಮಾಲಿನ್ಯಕ್ಕೆ ಹೋಲಿಸಿದ್ದಾರೆ, ಇದು ಅವರ "ಕೀಳು ರಾಜಕಾರಣ"ವನ್ನು ತೋರುತ್ತದೆ ಎಂದಿದೆ.

ಆದರೆ ಮಾಜಿ ಎಎಪಿ ಶಾಸಕ ಮಿಶ್ರಾ ತಾವು ಮಕ್ಕಳ ಚಿತ್ರವನ್ನಷ್ಟೇ ಪೋಸ್ಟ್ ಮಾಡಿದ್ದು ವಿರೋಧಿಗಳು ಅದನ್ನು ಮುಸ್ಲಿಮರ ಮಕ್ಕಳಂತೆ ನೋಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.ಅಲ್ಲದೆ ನನ್ನ ಟ್ವೀಟ್ ನಲ್ಲಿ ಹಿಂದೂ, ಮುಸ್ಲಿಂ ಎಂಬ ಯಾವ ಉಲ್ಲೇಖವಿಲ್ಲ ಎಂದೂ ಹೇಳಿದ್ದಾರೆ.

"ಚಿತ್ರವು ಹಿಂದೂ ಕುಟುಂಬದ್ದಾಗಿದ್ದರೆ ಅವರು ಹೀಗೆನ್ನುತ್ತಿರಲಿಲ್ಲ" ಎಂದೂ ಮಿಶ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಿಶ್ರಾ ವಿರುದ್ಧ ವಾಗ್ದಾಳಿ ನಡೆಸಿದ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು "ಒಂದು ಚುನಾವಣಾ ಟಿಕೆಟ್ ಗಾಗಿ ಈ ಮಟ್ಟಕ್ಕೆ ಇಳಿಯಬಾರದು, ಮುಂದೆ ಎದ್ದೇಳಲು ಕಷ್ಟವಾಗಲಿದೆ" ಎ<ದರು.

ಆದರೆ ಮಿಶ್ರಾ "ತಾವು ಜನಸಂಖ್ಯಾ ನಿಯಂತ್ರಣದ ಬಗೆಗೆ ಮಾಡಿದ ಒಂದು ಟ್ವೀಟ್ ನಿಂದ ಇಂತಹಾ ಬೆದರಿಕೆಗಳು ಬರುತ್ತಿದೆ, ಒಂದೊಮ್ಮೆ ನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಬಂದಾಗ ಈ ಜನರು ಏನು ಮಾಡುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಟ್ವಿಟ್ಟರ್ ಸಂಸ್ಥೆ ತನ್ನ ನಿಯಮಾವಳಿಗೆ ವಿರುದ್ಧವಾಗಿದ್ದ ಮಿಶ್ರಾ ಅವರ ಟ್ವೀಟ್ ಅನ್ನು ಅಳಿಸಿಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com