ಚಂಡಮಾರುತ, ಭಾರಿ ಮಳೆಗೆ ತತ್ತರಿಸಿದ ತಮಿಳುನಾಡು: ಆರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಬಂದ್!

ಕ್ಯಾರ್ ಚಂಡಮಾರುತ ಒಮನ್ ನತ್ತ ಮುಖ ಮಾಡಿದೆಯಾದರೂ ಅದರ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ದಕ್ಷಿಣ ಭಾರತದಲ್ಲಿ ಇನ್ನು ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಕ್ಯಾರ್ ಚಂಡಮಾರುತ ಒಮನ್ ನತ್ತ ಮುಖ ಮಾಡಿದೆಯಾದರೂ ಅದರ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ದಕ್ಷಿಣ ಭಾರತದಲ್ಲಿ ಇನ್ನು ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಅತ್ತ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಇಂದೂ ಸಹ ಭಾರಿ ಮಳೆ ಮುಂದುವರೆದಿದ್ದು, ತಿರುನೆಲ್ವೇಲಿ, ತೂತ್ತುಕುಡಿ, ಥೇಣಿ, ವಿರುಧುನಗರ್, ವೆಲ್ಲೂರು ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಪರಿಣಾಮ ಇಲ್ಲಿನ ಆರೂ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇತ್ತ ಚೆನ್ನೈ ಮಹಾ ನಗರಿಯಲ್ಲೂ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com