'ಒಂದು ದೇಶ, ಒಂದು ರೇಷನ್ ಕಾರ್ಡು'ಯೋಜನೆ ಸದ್ಯದಲ್ಲಿಯೇ ಜಾರಿಗೆ: ಕೇಂದ್ರ ಸರ್ಕಾರ 

ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಯ ಸೌಲಭ್ಯ ಪಡೆಯುತ್ತಿರುವ ನಾಗರಿಕರು 'ಒಂದು ದೇಶ, ಒಂದು ರೇಶನ್ ಕಾರ್ಡು'ಯೋಜನೆಯಡಿ ಯಾವುದೇ ರೇಷನ್ ಕಾರ್ಡು ಕೇಂದ್ರದಿಂದ ತಮ್ಮ ವಸ್ತುಗಳನ್ನು ಮುಕ್ತವಾಗಿ ಖರೀದಿಸಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಯ ಸೌಲಭ್ಯ ಪಡೆಯುತ್ತಿರುವ ನಾಗರಿಕರು 'ಒಂದು ದೇಶ, ಒಂದು ರೇಶನ್ ಕಾರ್ಡು'ಯೋಜನೆಯಡಿ ಯಾವುದೇ ರೇಷನ್ ಕಾರ್ಡು ಕೇಂದ್ರದಿಂದ ತಮ್ಮ ವಸ್ತುಗಳನ್ನು ಮುಕ್ತವಾಗಿ ಖರೀದಿಸಬಹುದು.


ಆಹಾರಧಾನ್ಯಗಳು ಅಗ್ಗದ ದರದಲ್ಲಿ ಸಿಗುವಂತೆ ಮಾಡುವುದು ಮತ್ತು ಗ್ರಾಹಕರ ಆಸೆ ಪೂರೈಸುವುದು ರೇಷನ್ ಕಾರ್ಡು ವಿತರಣೆಯ ಉದ್ದೇಶವಾಗಿದೆ. ಗ್ರಾಹಕರನ್ನು ಸಂತೃಪ್ತಿಪಡಿಸುವುದು ಪಿಡಿಎಸ್ ನಿರ್ವಾಹಕರ ಕೆಲಸವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಒಂದು ದೇಶ, ಒಂದು ಕಾರ್ಡು ಯೋಜನೆ ಜಾರಿಗೆ ತರಲು ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಜೂನ್ 1, 2020ಕ್ಕೆ ಗಡುವು ದಿನಾಂಕ ನಿಗದಿಪಡಿಸಿದ್ದಾರೆ. ಅದರ ಪ್ರಕಾರ ಕಾರ್ಡು ಹೊಂದಿರುವವರು ತಮ್ಮ ಪಾಲಿನ ಆಹಾರ ಧಾನ್ಯ ಮತ್ತು ಇತರ ವಸ್ತುಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ಪಡೆಯಬಹುದು.


ರೇಷನ್ ಕಾರ್ಡು ವಿವರಗಳನ್ನು ಆಧಾರ್ ಕಾರ್ಡು ಜೊತೆ ಸಂಪರ್ಕಿಸಲು ಡಿಸೆಂಬರ್ 31 ಅಂತಿಮ ದಿನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com