ಚಿದಂಬರಂಗೆ ಕ್ರೋನ್ಸ್ ಕಾಯಿಲೆ, ತಕ್ಷಣ ವಿಶೇಷ ಚಿಕಿತ್ಸೆಯ ಅಗತ್ಯ ಇದೆ: ಮೂಲಗಳು

ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ದೀರ್ಘಕಾಲಿಕ ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿದ್ದು,....
ಪಿ.ಚಿದಂಬರಂ
ಪಿ.ಚಿದಂಬರಂ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ದೀರ್ಘಕಾಲಿಕ ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ತಕ್ಷಣ ವಿಶೇಷ ಚಿಕಿತ್ಸೆಯ ಅಗತ್ಯ ಇದೆ ಎಂದು ಮಾಜಿ ಹಣಕಾಸು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ತಿಹಾರ್ ಜೈಲಿನಲ್ಲಿದ್ದ ಚಿದಂಬರಂ ಅವರಿಗೆ ಸೋಮವಾರ ಹಠಾತ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯ ಇದೆ ಎನ್ನಲಾಗಿದೆ.

ಚಿದಂರಬಂ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದ್ದು, ಕೂಡಲೇ ಅವರನ್ನು ಯಾವುದಾದರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರೆ ಉತ್ತಮ ಎಂದು ಹೆಸರು ಹೇಳಲು ಇಚ್ಚಿಸದ ಚಿದಂಬರಂ ಆಪ್ತರೊಬ್ಬರು ಹೇಳಿದ್ದಾರೆ.

ಕ್ರೋನ್ಸ್ ಕಾಯಿಲೆಯನ್ನು ಸರಳವಾಗಿ ಕರುಳಿನ ಉರಿಯೂತದ ಕಾಯಿಲೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಸಣ್ಣಕರುಳಿನ ಅಂತಿಮ ಭಾಗವು ಈ ರೋಗಕ್ಕೆ ಗುರಿಯಾಗುತ್ತದೆಯಾದರೂ ಕರುಳಿನುದ್ದಕ್ಕೂ ಇತರ ಕಡೆಗಳಲ್ಲಿಯೂ ಈ ರೋಗವು ಕಾಡಬಹುದು. ಅತಿಯಾದ ಹೊಟ್ಟೆಯುಬ್ಬರ, ವಾಕರಿಕೆ, ವಾಂತಿ ಮತ್ತು ಹೊಟ್ಟೆಯಲ್ಲಿನ ಇತರ ಕೆಲವು ಸಮಸ್ಯೆಗಳು ಕ್ರೋನ್ಸ್ ಕಾಯಿಲೆಯ ಲಕ್ಷಣಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com