370 ಮತ್ತು 35ಎ ವಿಧಿಗಳು ಭಯೋತ್ಪಾದನೆಗೆ ಹೆಬ್ಬಾಗಿಲು: ಕೇಂದ್ರ ಗೃಹ ಸಚಿವ ಅಮಿತ್ ಶಾ

370 ಮತ್ತು 35ಎ ವಿಧಿಗಳು ಭಯೋತ್ಪಾದನೆಗೆ ಹೆಬ್ಬಾಗಿಲುಗಳಾಗಿ ಬದಲಾಗಿದ್ದು, ಈ ವಿಧಿಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು- ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎಂದು ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: 370 ಮತ್ತು 35ಎ ವಿಧಿಗಳು ಭಯೋತ್ಪಾದನೆಗೆ ಹೆಬ್ಬಾಗಿಲುಗಳಾಗಿ ಬದಲಾಗಿದ್ದು, ಈ ವಿಧಿಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು- ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎಂದು ಹೇಳಿದ್ದಾರೆ. 

ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕತಾ ಓಟಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅಮಿತ್ ಶಾ, 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವುದರೊಂದಿಗೆ  ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸು ಈಡೇರಿದೆ ಎಂದು ಹೇಳಿದರು.

370ನೇ ವಿಧಿ ಭಾರತದಲ್ಲಿ ಭಯೋತ್ಪಾದನೆಗೆ ಹೆಬ್ಬಾಗಿಲಾಗಿ ಬದಲಾಗಿತ್ತು. ಎಪ್ಪತ್ತು ವರ್ಷಗಳಿಂದ ಯಾರೊಬ್ಬರು ಇದನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಮ್ಮು- ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯ 370 ಮತ್ತು 35 ಎ ನೇ ವಿಧಿಗಳನ್ನು ರದ್ದುಪಡಿಸುವ ಮೂಲಕ ಪೂರ್ಣಗೊಂಡಿದೆ  ಎಂದು ಅಮಿತ್‍ ಶಾ ಹೇಳಿದರು.

ಭಾರತದ ಏಕೀಕರಣದ ಇತಿಹಾಸವನ್ನು ವಿವರಿಸಿದ ಅಮಿತ್‍ ಶಾ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಬ್ರಿಟಿಷರು ಹಲವಾರು ಸಂಸ್ಥಾನಗಳಾಗಿ ವಿಭಜಿಸಿದ್ದರು. ಏಕೀಕೃತ ಭಾರತದ ಅಸ್ತಿತ್ವವು ಒಂದು ಸವಾಲಾಗಿತ್ತು. ಸವಾಲುಗಳ ನಡುವೆಯೂ ಸರ್ದಾರ್ ಪಟೇಲ್ ಅವರ ದಣಿವರಿಯದ ಪರಿಶ್ರಮವೇ ಭಾರತದ ಏಕೀಕರಣಕ್ಕೆ ಕಾರಣವಾಯಿತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com