ಸಂವಿಧಾನ ವಿಧಿ 370 ಮತ್ತು 35 ಎಗಳು ಭಾರತದೊಳಗೆ ನುಗ್ಗಲು ಭಯೋತ್ಪಾದಕರಿಗೆ ಹೆಬ್ಬಾಗಿಲುಗಳಾಗಿದ್ದವು: ಅಮಿತ್ ಶಾ 

ಗುರುವಾರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ.

Published: 31st October 2019 08:44 AM  |   Last Updated: 31st October 2019 11:18 AM   |  A+A-


Amit Shah wave at people

ಕಾರ್ಯಕ್ರಮದಲ್ಲಿ ಜನರತ್ತ ಕೈಬೀಸಿದ ಅಮಿತ್ ಶಾ

Posted By : Sumana Upadhyaya
Source : ANI

ನವದೆಹಲಿ: ಗುರುವಾರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ. ಈ ಸಂದರ್ಭದಲ್ಲಿ ಸರ್ಕಾರ ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸುತ್ತಿದ್ದು ರಾಜಧಾನಿ ದೆಹಲಿಯಲ್ಲಿ ಏಕತೆಗಾಗಿ ಓಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

 
ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.


ನಂತರ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕಳೆದ 70 ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370 ಮತ್ತು 35ಎಯನ್ನು ರದ್ದುಗೊಳಿಸುವ ಧೈರ್ಯ ಮನಸ್ಸು ಇದುವರೆಗೆ ಯಾವ ಸರ್ಕಾರಗಳೂ ಮಾಡಿರಲಿಲ್ಲ. ಈ ವರ್ಷದ ಚುನಾವಣೆಯಲ್ಲಿ ದೇಶದ ಜನತೆ ಆರಿಸಿ ಸಂಸತ್ತಿಗೆ ಕಳುಹಿಸಿದ ಪ್ರಧಾನಿ ಮೋದಿಯವರು ಆ ಕನಸನ್ನು ಸಾಕಾರಗೊಳಿಸಿದ್ದಾರೆ. ಕಳೆದ ಆಗಸ್ಟ್ 5 ಸಂಸತ್ತಿನ ಕಲಾಪದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ ಎಂದು ನೆನಪಿಸಿಕೊಂಡರು. 


ಸಂವಿಧಾನ ವಿಧಿ 370 ಮತ್ತು 35ಎ ಭಯೋತ್ಪಾದಕರಿಗೆ ಜಮ್ಮು-ಕಾಶ್ಮೀರದೊಳಗೆ ನುಗ್ಗಲು ಪ್ರವೇಶದ್ವಾರದಂತಿತ್ತು. ಇದೀಗ ಆ ಸಂವಿಧಾನ ವಿಧಿಗಳನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮೋದಿ ಮುಚ್ಚಿಹಾಕಿದ್ದಾರೆ. ಜಮ್ಮು-ಕಾಶ್ಮೀರವನ್ನು ದೇಶದ ಇತರ ಭಾಗಗಳ ಜೊತೆ ಸೇರಿಸಬೇಕೆಂಬ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ಕಳೆದ ಆಗಸ್ಟ್ 5ರಂದು ಸಾಕಾರಗೊಂಡಿದೆ ಎಂದು ಅಮಿತ್ ಶಾ ಹೇಳಿದರು. 


ಇಂದು ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Flagging off #RunForUnity on Rashtriya Ekta Diwas at Major Dhyan Chand National Stadium, New Delhi. https://t.co/a6ZfFeHC5g

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp