ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಏಕನಾಥ್ ಶಿಂಧೆ ಆಯ್ಕೆ: ರಾಜ್ಯಪಾಲರ ಭೇಟಿ;  ಕಾಂಗ್ರೆಸ್-ಎನ್ ಸಿಪಿ ಜೊತೆ ಚರ್ಚೆ!

ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಏಕನಾಥ್ ಶಿಂಧೆ ಆಯ್ಕೆಗೊಂಡಿದ್ದಾರೆ. 
ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಏಕನಾಥ್ ಶಿಂಧೆ ಆಯ್ಕೆ: ಶಿವಸೇನೆಯಿಂದ ರಾಜ್ಯಪಾಲರ ಭೇಟಿ
ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಏಕನಾಥ್ ಶಿಂಧೆ ಆಯ್ಕೆ: ಶಿವಸೇನೆಯಿಂದ ರಾಜ್ಯಪಾಲರ ಭೇಟಿ

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಏಕನಾಥ್ ಶಿಂಧೆ ಆಯ್ಕೆಗೊಂಡಿದ್ದಾರೆ. 

ಶಿವಸೇನೆಯ ಯುವ ಘಟಕದ ಅಧ್ಯಕ್ಷ, ಶಾಸಕ ಆದಿತ್ಯ ಠಾಕ್ರೆ ಬಿಜೆಪಿ-ಶಿವಸೇನೆ ಸರ್ಕಾರದ ಭಾಗವಾಗಿರುತ್ತಾರೆ ಎಂಬ ಬಗ್ಗೆ ಭಾರಿ ಊಹಾಪೋಹ ಉಂಟಾಗಿತ್ತು. ಆದರೆ ಅ.31 ರಂದು ನಡೆದ ಶಿವಸೇನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ವತಃ ಆದಿತ್ಯ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಗೊಂದಿರುವ 29 ವರ್ಷದ ಆದಿತ್ಯ ಠಾಕ್ರೆ ಇನ್ನೂ ಶಾಸಕಂಗದ ಕಾರ್ಯನಿರ್ವಹಣೆಯ ಬಗ್ಗೆ ಒಂದೆರಡು ವರ್ಷಗಳ ಕಾಲ ಅರ್ಥ ಮಾಡಿಕೊಳ್ಳಬೇಕು ಆದ್ದರಿಂದ ಸದ್ಯಕ್ಕೆ ಆದಿತ್ಯಠಾಕ್ರೆ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದಿಲ್ಲ ಎಂಬುದನ್ನು ಶಿವಸೇನೆ ಸ್ಪಷ್ಟಪಡಿಸಿದೆ. 

ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಲು ಉದ್ಧವ್ ಠಾಕ್ರೆ ಏಕನಾಥ್ ಶಿಂಧೆ ಅಥವಾ ಸುಭಾಶ್ ದೇಸಾಯಿ ಅವರ ಹೆಸರುಗಳನ್ನು ಅಂತಿಮಗೊಳಿಸಿದ್ದರು. ಇಬ್ಬರೂ ಸಹ ಈ ಹಿಂದಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಶಿವಸೇನೆಯಿಂದ ರಾಜ್ಯಪಾಲರ ಭೇಟಿ! 

ಈ ನಡುವೆ ಮಧ್ಯಾಹ್ನ 3:30 ರ ವೇಳೆಗೆ ಶಿವಸೇನೆಯ ಶಾಸಕರು ಆದಿತ್ಯಠಾಕ್ರೆ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಶಿವಸೇನೆಯ ಈ ನಡೆ ಕುತೂಹಲ ಕೆರಳಿಸಿದೆ. ಈ ನಡುವೆ ಶಿವಸೇನೆ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದು, ಎನ್ ಸಿಪಿ-ಕಾಂಗ್ರೆಸ್ ಜೊತೆಗೂ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com