ಮಾಜಿ ಪ್ರಧಾನಿ ಇಂದಿರಾ ಗಾಂಧಿ 35ನೇ ಪುಣ್ಯತಿಥಿ: ಸೋನಿಯಾ, ಡಾ ಮನಮೋಹನ್ ಸಿಂಗ್ ರಿಂದ ಗೌರವ ನಮನ 

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 35ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು.

Published: 31st October 2019 09:58 AM  |   Last Updated: 31st October 2019 11:20 AM   |  A+A-


Floral tribute

ಗಣ್ಯರಿಂದ ಗೌರವ ನಮನ

Posted By : Sumana Upadhyaya
Source : PTI

ನವದೆಹಲಿ: ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 35ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು.


ಇಂದು ಬೆಳಗ್ಗೆ ಇಂದಿರಾ ಗಾಂಧಿಯವರನ್ನು ನೆನೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ದೇಶದ ಹಿಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ವಿನಯ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.


ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ತಮ್ಮ ಅಜ್ಜಿಯವರನ್ನು ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಅವರ ತತ್ವಗಳು ತಮ್ಮ ಜೀವನಕ್ಕೆ ಮಾರ್ಗದರ್ಶನದ ಶಕ್ತಿಯಾಗಿದೆ. ಇಂದು ನನ್ನ ಅಜ್ಜಿಯವರ ಪುಣ್ಯತಿಥಿಯಾಗಿದೆ. ನಿಮ್ಮ ಕಬ್ಬಿಣದಂತಹ ಧೈರ್ಯದ ನಿರ್ಧಾರಗಳು ನನಗೆ ಪ್ರತಿ ಹೆಜ್ಜೆಯಲ್ಲಿಯೂ ಮಾರ್ಗದರ್ಶನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ಇಂದಿರಾ ಗಾಂಧಿಯವರು ದೇಶ ಕಂಡ ಮೊದಲ ಮಹಿಳಾ ಪ್ರಧಾನಿ. ಅವರು 1966ರಿಂದ 1977ರವರೆಗೆ ಮತ್ತು 1980ರಿಂದ ಅವರ ಹತ್ಯೆ 1984ರವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಅವರ ಅಂಗರಕ್ಷಕರಿಂದಲೇ ಅವರು 1884ರ ಅಕ್ಟೋಬರ್ 31ರಂದು ಹತ್ಯೆಗೀಡಾಗಿದ್ದರು. 


ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂಸ್ಟಾರ್ ಬಳಿಕ ಇಂದಿರಾ ಗಾಂಧಿ ಹತ್ಯೆಗೀಡಾಗಿದ್ದರು. ಸ್ವರ್ಣ ಮಂದಿರದಲ್ಲಿ ಆಶ್ರಯ ಪಡೆದಿದ್ದ ಸಿಖ್ ಪ್ರತ್ಯೇಕತಾವಾದಿಗಳನ್ನು ಮಣಿಸಲು ಭಾರತೀಯ ಸೇನೆಗೆ ಇಂದಿರಾ ಗಾಂಧಿಯವರು ಆರಪೇಷನ್ ಬ್ಲೂಸ್ಟಾರ್ ನಡೆಸಲು ಆದೇಶಿಸಿದ್ದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp