'ಬಾಲ್ಯದಿಂದ ಮಾಂಸಹಾರಿಗಳಾದರೇ ಮುಂದೆ ಮನುಷ್ಯರನ್ನೆ ತಿನ್ನಬೇಕಾಗುತ್ತೆ' 

ನಾವು ಬಾಲ್ಯದಿಂದಲೇ ಮಾಂಸಾಹಾರಿಗಳಾದರೇ ಮುಂದೊಂದು ದಿನ ಮನುಷ್ಯರನ್ನೆ ತಿನ್ನಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ್ ಹೇಳಿದ್ದಾರೆ.
ಗೋಪಾಲ ಭಾರ್ಗವ
ಗೋಪಾಲ ಭಾರ್ಗವ

ಭೂಪಾಲ್: ನಾವು ಬಾಲ್ಯದಿಂದಲೇ ಮಾಂಸಾಹಾರಿಗಳಾದರೇ ಮುಂದೊಂದು ದಿನ ಮನುಷ್ಯರನ್ನೆ ತಿನ್ನಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ್ ಹೇಳಿದ್ದಾರೆ.

ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ನೀಡುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಬಾಲ್ಯದಿಂದಲೇ ಮಾಂಸಾಹಾರಿಗಳಾದರೇ ಮುಂದೊಂದು ದಿನ ಮನುಷ್ಯರನ್ನೆ ತಿನ್ನಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ 'ಸನಾತನ ಸಂಸ್ಕೃತದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ, 'ಅಪೌಷ್ಟಿಕತೆಯಿಂದ ಬಳಲುತ್ತಿರುವ' ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು?ಎಂದು ಪ್ರಶ್ನಿಸಿದ್ದಾರೆ.

ಬೇಕಾಗಿಲ್ಲದವರಿಗೂ ಮೊಟ್ಟೆ ನೀಡುತ್ತಿದ್ದಾರೆ, ನಾವು ಯಾರಿಗೂ ಆಹಾರವನ್ನು ಬಲವಂತವಾಗಿ ನೀಡಬಾರದು ಎಂದು ಭಾರ್ಗವ ಹೇಳಿದ್ದಾರೆ.

ಅಪೌಷ್ಟಿಕತೆ ನಿವಾರಣೆಗೆ ಮುಂದಿನ ತಿಂಗಳಿನಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನಊಟದಲ್ಲಿ  ಮೊಟ್ಟೆಗಳನ್ನು ನೀಡಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಇಮಾರ್ತಿ ದೇವಿ ಹೇಳಿದ್ದರು. 

ಮೊಟ್ಟೆ ಮಾಂಸಾಹಾರವಲ್ಲ ಅದು ಸಸ್ಯಹಾರಕ್ಕೆ ಸೇರಿದ್ದು ಎಂದು ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com