ಅಸ್ಸಾಂ: ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಇಲ್ಲದವರು ಮುಂದೆಯೂ ಎಲ್ಲ ಹಕ್ಕು  ಹೊಂದಿರುತ್ತಾರೆ- ಎಂಇಎ

ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಇಲ್ಲದವರು ಮೊದಲಿನಂತೆ ಮುಂದೆಯೂ ತಮ್ಮ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರವೀಶ್ ಕುಮಾರ್
ರವೀಶ್ ಕುಮಾರ್

ಅಸ್ಸಾಂ: ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಇಲ್ಲದವರು ಮೊದಲಿನಂತೆ ಮುಂದೆಯೂ ತಮ್ಮ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.


ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ  ಅಸ್ಸಾಂನಲ್ಲಿ ವಾಸಿಸುವ  ವ್ಯಕ್ತಿಯ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೇ  ಅವರು ಈ ಹಿಂದೆ  ಅನುಭವಿಸಿದ ಯಾವುದೇ ಹಕ್ಕುಗಳು ಅಥವಾ ಅರ್ಹತೆಗಳಿಂದ ವಂಚಿತರಾಗುವುದಿಲ್ಲ ಎಂದು ಅದು ಹೇಳಿದೆ.

ಎನ್ ಆರ್ ಸಿ ಅಂತಿಮ ಪಟ್ಟಿ ಸರಿಯಿಲ್ಲ ಎಂದು ವಿವಿಧ ವಿದೇಶಿ ಮಾಧ್ಯಮಗಳಿಂದ ಟೀಕೆ ಬಂದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಪ್ರತಿಕ್ರಿಯಿಸಿದೆ.  ಅಸ್ಸಾಂನಲ್ಲಿ ಮಾರ್ಚ್ 24, 1971ಕ್ಕೂ ಮುಂಚೆ ,ತದನಂತರ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ಗುರುತಿಸಲು ಎನ್ ಆರ್ ಸಿ ಪಟ್ಟಿಯನ್ನು ತಯಾರಿಸಲಾಗಿದೆ. 

3 ಕೋಟಿ 3 ಲಕ್ಷ ಅರ್ಜಿದಾರರ ಪೈಕಿಯಲ್ಲಿ ಸುಮಾರು 19 ಲಕ್ಷ ಜನರನ್ನು ಎನ್ ಆರ್ ಸಿ ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.  ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದವರು ಮುಂದೆಯೂ ತಮ್ಮ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದವರನ್ನು ವಿದೇಶಿಗರನ್ನಾಗಿ ಮಾಡುವುದಿಲ್ಲ, ಅವರ ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ, ಮುಂದೆಯೂ ಈ ಹಿಂದೆ ಎಲ್ಲಾ ಹಕ್ಕುಗಳನ್ನು ಅನುಭವಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com