ಚಂದ್ರಯಾನ-2 ಪಾದಾರ್ಪಣೆ: ಪ್ರಧಾನಿ ಜೊತೆ ವೀಕ್ಷಿಸಲಿರುವ ರಾಯಚೂರು ಹುಡುಗಿ

ಚಂದ್ರಯಾನ-2 ಗಗನ ನೌಕೆ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ನೇರ ಪ್ರಸಾರ ಕಣ್ತುಂಬಿಕೊಳ್ಳುವ ಅವಕಾಶ ಬಿಸಿಲನಾಡು ರಾಯಚೂರಿನ ವಿದ್ಯಾರ್ಥಿನಿ ವೈಷ್ಣವಿಗೆ ಲಭಿಸಿದೆ.
ಪ್ರಧಾನಿ ಮೋದಿ ಮತ್ತು ವಿದ್ಯಾರ್ಥಿನಿ ವೈಷ್ಣವಿ
ಪ್ರಧಾನಿ ಮೋದಿ ಮತ್ತು ವಿದ್ಯಾರ್ಥಿನಿ ವೈಷ್ಣವಿ

ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ನೇರ ಪ್ರಸಾರ ಕಣ್ತುಂಬಿಕೊಳ್ಳುವ ಅವಕಾಶ ಬಿಸಿಲನಾಡು ರಾಯಚೂರಿನ ವಿದ್ಯಾರ್ಥಿನಿ ವೈಷ್ಣವಿಗೆ ಲಭಿಸಿದೆ.

ಚಂದ್ರನ ಅಂಗಳದತ್ತ ಇಸ್ರೋ ಉಡಾಯಿಸಿರುವ ಗಗನನೌಕೆ ಸೆಪ್ಟೆಂಬರ್ 7 ರಂದು, ಚಂದ್ರನ ಉತ್ತರ ಧೃವದ ಮೇಲೆ ಇಳಿಯಲಿದೆ. ಅಂದು ಈ ಐತಿಹಾಸಿಕ ಕ್ಷಣವನ್ನು ಪ್ರಧಾನಿ ಮೋದಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ದಲ್ಲಿ ನೇರ ಪ್ರಸಾರ ವೀಕ್ಷಿಸಲಿದ್ದಾರೆ.

ಪ್ರಧಾನಿ ಜೊತೆ ಕುಳಿತು ಚಂದ್ರಯಾನ-2, ಇಳಿಯುವ ನೇರಪ್ರಸಾರವನ್ನು ವೀಕ್ಷಿಸಲು ಇಸ್ರೋ ಆನ್ ಲೈನ್ ನಲ್ಲಿ ಆಗಸ್ಟ್ 25ರಂದು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿತ್ತು. ಆಗಸ್ಟ್ 25 ರಂದು ನಡೆಸಿದ್ದ ರಸಪ್ರಶ್ನೆಯಲ್ಲಿ 10 ನಿಮಿಷದ ಸಮಯದಲ್ಲಿ 20 ಪ್ರಶ್ನೆಗಳನ್ನು ಕೇಳಲಾಗಿತ್ತು. ರಾಯಚೂರು ಜಿಲ್ಲೆ ಸಿಂಧನೂರಿನ ಡಫೋಡಿಲ್ಸ್ ಕಾನ್ಸೆಪ್ಟ್ ಖಾಸಗಿ ಶಾಲೆಯ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಇದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ, ಕೇವಲ 5 ನಿಮಿಷದ ಒಳಗಾಗಿ 20 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾಳೆ. ಈ ಮೂಲಕ ಪ್ರಧಾನಿ ಮೋದಿ ಜೊತೆ ಕುಳಿತು ಚಂದ್ರಯಾನ-2 ಇಳಿಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾಳೆ. ಮಗಳ ಈ ಸಾಧನೆಗೆ ವೃತ್ತಿಯಲ್ಲಿ ವಕೀಲರಾಗಿರುವ ವೈಷ್ಣವಿ ತಂದೆ ನಾಗರಾಜ್ ಹಾಗೂ ಶಾಲೆ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com