ದೇಶದ ಆರ್ಥಿಕ ದುಸ್ಥಿತಿಗೆ ನರೇಂದ್ರ ಮೋದಿಯೇ ಹೊಣೆ: ಪಿ.ಚಿದಂಬರಂ

ದೇಶದಲ್ಲಿನ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ನರೇಂದ್ರ ಮೋದಿಯೇ ಹೊಣೆ ಎಂದಿರುವ ಮಾಜಿ ಸಚಿವ ಪಿ.ಚಿದಂಬರಂ, ಶೇ.5ರಷ್ಟು ಜಿಡಿಪಿ ಎಂದರೇನು ಗೊತ್ತಿದೆಯೆ ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪಿ.ಚಿದಂಬರಂ,
ಪಿ.ಚಿದಂಬರಂ,

ನವದೆಹಲಿ: ದೇಶದಲ್ಲಿನ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ನರೇಂದ್ರ ಮೋದಿಯೇ ಹೊಣೆ ಎಂದಿರುವ ಮಾಜಿ ಸಚಿವ ಪಿ.ಚಿದಂಬರಂ, ಶೇ.5ರಷ್ಟು ಜಿಡಿಪಿ ಎಂದರೇನು ಗೊತ್ತಿದೆಯೆ ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
  
ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿರುವ ಅವರು, ಮಂಗಳವಾರ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಅವರ ಸಿಬಿಐ ಕಸ್ಟಡಿಯನ್ನು ನ್ಯಾಯಾಲಯ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ.
  
2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತಕ್ಕೆ ಕೇಂದ್ರ ಸರ್ಕಾರದ ನೀತಿಗಳೆ ಕಾರಣ. ಶೇ.5 ಎಂದರೇನು? ನಿಮಗೆ ಶೇ.5 ನೆನಪಿದೆಯೇ ಎಂದು ಮಾಧ್ಯಮಗಳತ್ತ ಕೈಸನ್ನೆ ಮಾಡಿ ತೋರಿಸಿದರು. 

ಇದಾಗಿ ಕೆಲವು ಗಂಟೆಗಳ ನಂತರ, ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಪಿ.ಚಿದಂಬರಂ ಅವರ ವೀಡಿಯೋವನ್ನು ಹಂಚಿಕೊಂಡಿದೆ. ಅವರು ಬಿಜೆಪಿ ಸರ್ಕಾರದಿಂದ ಏಕೆ ಭಯಭೀತರಾಗಿದ್ದಾರೆ ಎಂಬುದನ್ನು ಜ್ಞಾಪಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ.

 ಪಕ್ಷದ ಪ್ರಕಾರ,  ಚಿದಂಬರಂ ಅವರು ಇತ್ತೀಚಿನ ಜಿಡಿಪಿ ಅಂಕಿಅಂಶವನ್ನು ಸೂಚಿಸುತ್ತಿದ್ದಾರೆ. ಇದು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಶೇ.5ಕ್ಕೆ ತಲುಪಿದೆ ಎಂಬುದರ ಸೂಚನೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com