ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಜಮ್ಮು ಮತ್ತು ಕಾಶ್ಮೀರ ನಿಯೋಗ ಭೇಟಿ

ಜಮ್ಮು ಮತ್ತು ಕಾಶ್ಮೀರ ರಾಜ್ಯದ  100 ಮಂದಿಯನ್ನು ಒಳಗೊಂಡ  ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

Published: 03rd September 2019 01:19 PM  |   Last Updated: 03rd September 2019 01:19 PM   |  A+A-


Amit Shah

ಅಮಿತ್ ಶಾ ಜಮ್ಮು ಕಾಶ್ಮೀರ ಭೇಟಿ

Posted By : Srinivasamurthy VN
Source : UNI

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದ  100 ಮಂದಿಯನ್ನು ಒಳಗೊಂಡ  ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ನಾರ್ತ್ ಬ್ಲಾಕ್ ನಲ್ಲಿರುವ  ಗೃಹ ಸಚಿವರ ಕಛೇರಿಯಲ್ಲಿ  ಜಮ್ಮು,ಶ್ರೀನಗರ, ಪುಲ್ವಾಮಾ ಹಾಗೂ ಲಡಾಕ್ ಪ್ರದೇಶಗಳ  ನಾಗರೀಕರನ್ನು ಒಳಗೊಂಡ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಕಳೆದ ಆಗಸ್ಟ್ 5 ರಂದು ಕೇಂದ್ರ ಸರ್ಕಾರ,  ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಜಮ್ಮು ಕಾಶ್ಮೀರ ಜನರೊಂದಿಗೆ ಕೇಂದ್ರ ಗೃಹ ಸಚಿವರು  ನಡೆಸಿದ ಮೊದಲ ಸಭೆ ಇದಾಗಿದೆ.

ಗೃಹ ಸಚಿವರೊಂದಿಗೆ ನಿಯೋಗ ನಡೆಸಿದ ಮಾತುಕತೆಯ ವಿವರಗಳನ್ನು  ಗೃಹ ಸಚಿವಾಲಯ ಬಹಿರಂಗಪಡಿಸಿಲ್ಲ.  ವಿಶ್ವಾಸ ಮೂಡಿಸುವ ಸರ್ಕಾರದ  ಕ್ರಮಗಳ ಭಾಗವಾಗಿ  ಈ ಸಭೆ ನಡೆದಿದೆ ಎಂದು ಹೇಳಲಾಗಿದೆ. 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಪ್ರತಿಭಟನೆಗನ್ನು  ಹತ್ತಿಕ್ಕಲು  ಸರ್ಕಾರ ರಾಜ್ಯದಲ್ಲಿ ಹಲವು  ರೀತಿಯ ನಿರ್ಬಂಧಗಳನ್ನು ವಿಧಿಸಿದೆ. ಹಂತ ಹಂತವಾಗಿ  ಕೆಲವು ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ.

ರಾಜ್ಯದಲ್ಲಿ ಶಾಲೆ, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ, ಸ್ಥಿರ ದೂರವಾಣಿ ಸೇವೆಗಳನ್ನು ಪುನರಾಂಭಿಸಲಾಗಿದೆ. ಶ್ರೀನಗರ ಹಾಗೂ ಕಾಶ್ಮೀರ ಕಣಿವೆಯಲ್ಲಿ  ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಜಮ್ಮುಕಾಶ್ಮೀರ ಹಾಗೂ ಲಡಾಕ್ ಎರಡು ಕೇಂದ್ರಾಡಳಿ ಪ್ರದೇಶಗಳಾಗಿ ಆಕ್ಟೋಬರ್ 31 ರಿಂದ ಅಸ್ತಿತ್ವಕ್ಕೆ ಬರಲಿವೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp