ಭಜರಂಗದಳ ಮತ್ತು ಬಿಜೆಪಿಗೆ ಐಎಸ್ಐನಿಂದ ಹಣ: ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು

ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆ ಕುರಿತಾಗಿ ಹೇಳಿಕೆ ನಿಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ  ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
ದಿಗ್ವಿಜಯ ಸಿಂಗ್
ದಿಗ್ವಿಜಯ ಸಿಂಗ್

ನವದೆಹಲಿ: ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆ ಕುರಿತಾಗಿ ಹೇಳಿಕೆ ನಿಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ  ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಜಾಫರ್ ಪುರದ ನ್ಯಾಯಾಲಯದಲ್ಲಿ  ಸಿಜೆಎಂ ಸೂರ್ಯ ಕಾಂತ್ ತ್ರಿಪಾಠಿ  ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಈ ಪ್ರಕರಣ  ಸೆಪ್ಟೆಂಬರ್ 13 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ದಿಗ್ವಿಜಯ ಸಿಂಗ್ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಕುಖ್ಯಾತ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪತ್ತೇದಾರಿ ಏಜೆನ್ಸಿಯಿಂದ ಬಿಜೆಪಿ ಮತ್ತು ಭಜರಂಗದಳಗಳು ಹಣವನ್ನು ತೆಗೆದುಕೊಳ್ಳುತ್ತವೆ ಮುಸ್ಲಿಮರಿಗಿಂತ ಮುಸ್ಲಿಮೇತರರು ಪಾಕಿಸ್ತಾನಕ್ಕಾಗಿ ಗೂಢಚರ್ಯೆ ನಡೆಸುತ್ತಿಒದ್ದಾರೆ ಎಂದಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಯಿಸಿದ್ದ ಬಿಜೆಪಿ ಸಿಂಗ್ ಅವರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದಿತ್ತು.

ಐಪಿಸಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅವಮಾನಿಸುವುದು ಅಥವಾ ಅಪವಿತ್ರಗೊಳಿಸುವುದು), 153 (ಗಲಭೆಗೆ ಕಾರಣವಾಗುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು), 504 (ಪ್ರಚೋದನಾಕಾರಿ ಭಾಷಣ) ಮತ್ತು ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

"ಭಜರಂಗದಳ ಮತ್ತು ಭಾರತೀಯ ಜನತಾ ಪಕ್ಷವು ಐಎಸ್ಐನಿಂದ ಹಣವನ್ನು ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಗಮನ ಕೊಡಿ" ಎಂದು ದಿಗ್ವಿಜಯ ಸಿಂಗ್ ಸುದ್ದಿಗಾರರೊಡನೆ ಮಾತನಾಡಿ ಹೇಳಿದ್ದರು. ಆದರೆ ಆದಾಗ್ಯೂ, ಒಂದು ದಿನದ ನಂತರ, ಕೆಲವು ಚಾನೆಲ್‌ಗಳು ತಮ್ಮ ಹೇಳಿಕೆಗಳ ಬಗ್ಗೆ "ಸಂಪೂರ್ಣವಾಗಿ ಸುಳ್ಳು ಹಾಗೂ ತಿರುಚಿದ ಸುದ್ದಿ " ಪ್ರಸಾರ ಮಾಡುತ್ತಿದೆ ಎಂದು ಅವರು ಪ್ರತಿಕ್ರಯಿಸಿದ್ದರು.

ಇನ್ನು ಬಿಜೆಪಿ ನಾಯಕರೊಬ್ಬರು ಉತ್ತರ ಪ್ರದೇಶದ ಸಂಭಾಲ್ ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ಬಿಜೆಪಿಯ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್ ಅರೋರಾ ಅವರು ಚಂದೌಸಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com