ಬೇಕಾಬಿಟ್ಟಿಯಾಗಿ ಸ್ಕೂಟರ್ ರೈಡಿಂಗ್: 23 ಸಾವಿರ ದಂಡ ಕಟ್ಟಲಾಗದೇ ಸ್ಕೂಟರ್ ಅನ್ನೇ ಬಿಟ್ಟು ಹೋದ!

ಸೆಪ್ಟೆಂಬರ್ 1ರಂದು ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಬಾರಿ ದಂಡ ಕಟ್ಟಬೇಕಾಗಿತ್ತು. ಅದೇ ರೀತಿ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುತ್ತಿದ್ದ ಸವಾರನು ಸಂಚಾರಿ ಪೊಲೀಸರು ಹಾಕಿದ ದಂಡ ಕಟ್ಟಲಾಗದೆ ಕೊನೆಗೆ ತನ್ನ ಬೈಕ್ ಅನ್ನೇ ಬಿಟ್ಟು ಹೋಗಿದ್ದಾನೆ.
ದಿನೇಶ್ ಮದನ್
ದಿನೇಶ್ ಮದನ್

ನವದೆಹಲಿ: ಸೆಪ್ಟೆಂಬರ್ 1ರಂದು ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಬಾರಿ ದಂಡ ಕಟ್ಟಬೇಕಾಗಿತ್ತು. ಅದೇ ರೀತಿ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುತ್ತಿದ್ದ ಸವಾರನು ಸಂಚಾರಿ ಪೊಲೀಸರು ಹಾಕಿದ ದಂಡ ಕಟ್ಟಲಾಗದೆ ಕೊನೆಗೆ ತನ್ನ ಬೈಕ್ ಅನ್ನೇ ಬಿಟ್ಟು ಹೋಗಿದ್ದಾನೆ.

ದೆಹಲಿಯ ಗುರುಗ್ರಾಮದ ದಿನೇಶ್ ಮದನ್ ಎಂಬಾತ 15 ಸಾವಿರ ರುಪಾಯಿಗೆ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಖರೀದಿಸಿ ಓಡಿಸುತ್ತಿದ್ದ. ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸಿಕೊಂಡು ಬರುವಾಗ ಸಂಚಾರಿ ಪೊಲೀಸರು ತಡೆದಿದ್ದಾರೆ. 

ಸ್ಕೂಟರ್ ದಾಖಲೆಗಳು, ಚಾಲನಾ ಪರವಾನಗಿ ತೋರಿಸುವಂತೆ ಪೊಲೀಸರು ಕೇಳಿದ್ದಾರೆ. ಆದರೆ ಇದು ಯಾವುದೇ ತನ್ನ ಬಳಿ ಇಲ್ಲ ಎಂದು ಹೇಳಿದ್ದಾನೆ. ನಂತರ ಪೊಲೀಸರು ಎಲ್ಲಾ ಲೆಕ್ಕಾ ಹಾಕಿ ಬರೋಬ್ಬರಿ 23 ಸಾವಿರ ರುಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ. ದಂಡದ ಮೊತ್ತವನ್ನು ಕೇಳಿ ದಂಗಾದ ಸವಾರ ನನ್ನ ಬಳಿ ಅಷ್ಟು ದುಡ್ಡಿಲ್ಲ. ಅದರ ಬದಲಿಗೆ ಈ ಸ್ಕೂಟರ್ ಅನ್ನು ನೀವೆ ಇಟ್ಟುಕೊಳ್ಳಿ ಎಂದು ಬಿಟ್ಟು ಹೋಗಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com