ಸೆ.19 ರಂದು ಭಾರತೀಯ ವಾಯುಪಡೆಗೆ ಮೊದಲ ರಫೇಲ್ ವಿಮಾನ ಸೇರ್ಪಡೆ

ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಇದೇ 9 ರಂದು ಔಪಚಾರಿಕವಾಗಿ ಸೇರ್ಪಡೆಯಾಗಲಿದೆ. 

Published: 03rd September 2019 01:42 PM  |   Last Updated: 03rd September 2019 01:44 PM   |  A+A-


Rafale jet

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ನವದೆಹಲಿ: ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಇದೇ 9 ರಂದು ಔಪಚಾರಿಕವಾಗಿ ಸೇರ್ಪಡೆಯಾಗಲಿದೆ. 

ಇದಕ್ಕಾಗಿ ರಕ್ಷಣಾ  ಸಚಿವ  ರಾಜನಾಥ್ ಸಿಂಗ್ ಮತ್ತು  ಮುಖ್ಯ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಫ್ರಾನ್ಸ್ ಗೆ  ಭೇಟಿ ನೀಡಲಿದ್ದಾರೆ  ಎನ್ನಲಾಗಿದೆ.   19 ರಂದು ಫ್ರಾನ್ಸ್ ತನ್ನ ಮೊದಲ ರಫೇಲ್ ಫೈಟರ್ ವಿಮಾನವನ್ನು ಔಪಚಾರಿಕವಾಗಿ ಹಸ್ತಾಂತರಿಸಲಿದೆ ಎಂದು ಫ್ರಾನ್ಸ್ಅಧಿಕಾರಿಗಳು ಹೇಳಿದ್ದಾರೆ ಎಂದೂ ವರದಿ ಯಾಗಿದೆ .  

ಔಪಚಾರಿಕ ಸೇರ್ಪಡೆ ಸಮಾರಂಭವು ಫ್ರಾನ್ಸ್‌ನ ಮೆರಿಗ್ನಾಕ್‌ನಲ್ಲಿ ನಡೆಯಲಿದೆ.  ಇದಕ್ಕಾಗಿ ಸಚಿವ ರಾಜನಾಥ್ ಸಿಂಗ್ ಕೂಡ ಫ್ರಾನ್ಸ್‌ಗೆ ತೆರಳುವುದು ಬಹತೇಕ ನಿಚ್ಚಳ ಎನ್ನಲಾಗಿದೆ. ಭಾರತ-  ಫ್ರಾನ್ಸ್ ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳಲ್ಲಿ  ಮೊದಲನೆಯ ಸಮರ ವಿಮಾನ ಸೇರ್ಪಡೆ  ಸಮಾರಂಭ  ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಸಬೇಕು ಎಂದು ಭಾರತ ಫ್ರೆಂಚ್ ಸರ್ಕಾರಕ್ಕೆ ಸಷ್ಟಪಡಿಸಿತ್ತು . 

ನಾಲ್ಕು ರಫೇಲ್ ಜೆಟ್‌ ವಿಮಾನಗಳು ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ  ಒಪ್ಪಂದದ ಪ್ರಕಾರ ಎಲ್ಲಾ 36 ವಿಮಾನಗಳು  2022 ರ ವೇಳೆಗೆ ವಾಯುಪಡೆಯ ವಶಕ್ಕೆ ಬರಲಿವೆ ಎಂದೂ ಹೇಳಲಾಗಿದೆ. 2016 ರಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್ ಸಮರ ವಿಮಾನ ಖರೀದಿಗಾಗಿ 59,ಸಾವಿರ  ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp