106 ಕೆಜಿ ಬೆಲ್ಜಿಯನ್ ಚಾಕೋಲೇಟ್ ನಿಂದ ಗಣೇಶ ಮೂರ್ತಿ ಸೃಷ್ಟಿಸಿದ ಮುಸ್ಲಿಂ ಕಲಾವಿದ!

ಕಲೆಗೆ ಯಾವುದೇ ಜಾತಿ, ಧರ್ಮದ ಗಡಿಗಳ ಹಂಗಿಲ್ಲ ಎಂಬುದನ್ನು ಇಲ್ಲೊಬ್ಬ ಕಲೆಗಾರ ಸಾಬೀತು ಪಡಿಸಿದ್ದಾನೆ. ಹಿಂದೂಗಳ ಸಡಗರದ ಹಬ್ಬ ಗಣೇಶ ಚತುರ್ಥಿಯಂದೇ ಇಲ್ಲೊಬ್ಬ ಮುಸ್ಲಿಂ ಕಲೆಗಾರ ಬರೋಬ್ಬರಿ 106 ಕೆಜಿ ಬೆಲ್ಜಿಯಂ ಚಾಕೋಲೇಟ್ ನಲ್ಲಿ ಗಣೇಶ ಮೂರ್ತಿಯನ್ನು ಸೃಷ್ಟಿಸಿದ್ದಾನೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲುಧಿಯಾನ: ಕಲೆಗೆ ಯಾವುದೇ ಜಾತಿ, ಧರ್ಮದ ಗಡಿಗಳ ಹಂಗಿಲ್ಲ ಎಂಬುದನ್ನು ಇಲ್ಲೊಬ್ಬ ಕಲೆಗಾರ ಸಾಬೀತು ಪಡಿಸಿದ್ದಾನೆ. ಹಿಂದೂಗಳ ಸಡಗರದ ಹಬ್ಬ ಗಣೇಶ ಚತುರ್ಥಿಯಂದೇ ಇಲ್ಲೊಬ್ಬ ಮುಸ್ಲಿಂ ಕಲೆಗಾರ ಬರೋಬ್ಬರಿ 106 ಕೆಜಿ ಬೆಲ್ಜಿಯನ್ ಚಾಕೋಲೇಟ್ ನಲ್ಲಿ ಗಣೇಶ ಮೂರ್ತಿಯನ್ನು ಸೃಷ್ಟಿಸಿದ್ದಾನೆ. 

ಸಿಕ್ಖ್ ಬೇಕರಿ ಮಾಲೀಕನ ಮಾರ್ಗದರ್ಶನದೊಂದಿಗೆ  ಮುಸ್ಲಿಂ ವ್ಯಕ್ತಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾನೆ. ಹರೀಂದರ್ ಕುಕ್ರೆಜಾ ಎಂಬುವವರು ಬೇಕರಿ ಮಾಲೀಕರಾಗಿದ್ದು ಪ್ರತೀವರ್ಷ ಚಾಕೋಲೇಟ್ ನಲ್ಲಿ ಗಣೇಶ ಮೂರ್ತಿ ತಯಾರಿಸಿ ಬಡ ಮಕ್ಕಳಿಗೆ ಚಾಕೋಲೇಟ್'ನ್ನು ಹಂಚುತ್ತಾರೆ. ಇದರಂತೆ ಈ ವರ್ಷ ಕೂಡ ಮುಸ್ಲಿಂ ಕಲೆಗಾರರೊಬ್ಬರ ಕೈಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. 

ಚಾಕೋಲೇಟ್ ನಲ್ಲಿ ಗಣೇಶ ಮೂರ್ತಿ ತಯಾರಿಸಲು 3 ದಿನಗಳು ಬೇಕಾಯಿತು. ನೀರಿನ ಬದಲು ಹಾಲನ್ನು ಮಿಶ್ರಣ ಮಾಡುವ ಮೂಲಕ ಚಾಕೋಲೇಟ್ ತಯಾರಿಸಲಾಯಿತು. ಚಾಕೋಲೇಟ್'ನ್ನು ಬಡ ಮಕ್ಕಳಿಗೆ ಹಂಚಲಾಯಿತು ಎಂದು ಹರೀಂದರ್ ಕುಕ್ರೇಜ ಅವರು ಹೇಳಿದ್ದಾರೆ. 

ಶಾಂತಿ ಹಾಗೂ ಸೌಹಾರ್ದತೆ ಸಾರುವ ಸಲುವಾಗಿ ಮುಸ್ಲಿಂ ಕಲಾವಿದನಿಂದಲೇ ಈ ಮೂರ್ತಿಯನ್ನು ಮಾಡಿಸಲಾಯಿತು ಎಂದು ಹರೀಂದರ್ ತಿಳಿಸಿದ್ದಾರೆ. 

ಗಣೇಶ ನೋಡುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ಇತರೆ ಗಣೇಶ ಮೂರ್ತಿಗಳಿಗೆ ಹೋಲಿಸಿದರೆ ವಿಶೇಷವಾಗಿ ತಯಾರಿಸಲಾದ ಈ ಗಣೇಶ ಮೂರ್ತಿ ಯಾವುದೇ ರೀತಿಯ ಪರಿಸರ ಮಾಲೀನ್ಯವಾಗುವುದಿಲ್ಲ ಎಂದು ಸ್ಥಳೀಯ ನಿವಾಸಿ ವರ್ಷ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com